Header Ads
Breaking News

ಮಳೆ ಬಂದಾಗ ಜಲಾವೃತಗೊಳ್ಳುವ ಜಪ್ಪಿನಮೊಗರು ಪ್ರದೇಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ಪ್ರದೇಶದಲ್ಲಿ ಒಂದು ಮಳೆ ಬಂದರೆ ಸಾಕು ಸಂಪೂರ್ಣ ಜಲಾವೃತಗೊಳ್ಳುತ್ತದೆ. ಕಳೆದ 25 ವರ್ಷದಿಂದೀಚೆಗೆ ಇದೇ ಪರಿಸ್ಥಿತಿ ಬಂದೋದಗಿದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಇನ್ನು ಮಳೆಗಾಲ ಸಮೀಪಿಸುತ್ತಿದ್ದು, ನೀರು ಹರಿದು ಹೋಗಲು ಸಮಪರ್ಕವಾದ ವ್ಯವಸ್ಥೆಯನ್ನು ಪಾಲಿಕೆಯ ಜನಪ್ರತಿನಿಧಿಗಳು ಮಾಡಬೇಕಿದೆ. ಇಲ್ಲವಾದಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಹರಿದು ಹೋಗದೆ ಅಪಾಯ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ

Related posts

Leave a Reply

Your email address will not be published. Required fields are marked *