Header Ads
Breaking News

ಮಳೆ ಸಿಡಿಲಬ್ಬರಕ್ಕೆ ಜಾನುವಾರು ಬಲಿ

ಮಳೆ ಮತ್ತು ಸಿಡಿಲಿನ ಅಬ್ಬರಕ್ಕೆ ಜಾನುವಾರು ಬಲಿಯಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕೆರೂರ ಗ್ರಾಮದ ತೋಟದಲ್ಲಿ ನಡೆದಿದೆ. ಕೆರೂರ ಗ್ರಾಮದ ಕಲ್ಲಪ್ಪ ಹೆಳವರ ರವರಿಗೆ ಸೇರಿದ ಎತ್ತು ಸಿಡಿಲಬ್ಬರಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದೆ ರೈತ ತನ್ನ ಜೀವನೋಪಾಯಕ್ಕಾಗಿ ಎತ್ತುಗಳನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದು, ಕಣ್ಣೆದುರೆ ಎತ್ತಿನ ಸಾವು ರೈತನಿಗೆ ದುಃಖ ತಂದಿದೆ.ಮುಂದೆ ಜಮೀನು ಉಳುಮೆ ಮಾಡಲು ಎತ್ತು ಖರೀದಿಸಲು ರೈತನಲ್ಲಿ ಹಣದ ಕೊರತೆ ಎದುರಾಗಿದೆ. ಘಟನೆಗೆ ಸಂಬಂಧಿಸಿ ಇಲಾಖೆ ರೈತನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

 

Related posts

Leave a Reply

Your email address will not be published. Required fields are marked *