Header Ads
Breaking News

ಮಾಜಿ ಶಾಸಕಿಯವರು ಟೂಲ್‍ಕಿಟ್ ಸಂಸ್ಕøತಿಯನ್ನು ಬಿಡಲಿ : ಒಬಿಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ್

ಪುತ್ತೂರು : ಸಮಾಜದಲ್ಲಿನ ಸಣ್ಣ ತಪ್ಪುಗಳನ್ನು ಹುಡುಕುವ ಜನಪ್ರತಿನಿಧಿ ಯಾವತ್ತೂ ಪರಿಪೂರ್ಣ. ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಲೋಪ ಸರಿಪಡಿಸುವ ಕೆಲಸ ಮಾಡಿದರೇ ಹೊರತು ಎಲ್ಲೂ ಕೂಡಾ ಅನ್ನಕ್ಕೆ ಕನ್ನ ಹಾಕುವ ಕೆಲಸ ಮಾಡಿಲ್ಲ ಎಂದು ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾರಾಯಣ ಹೇಳಿದ್ದಾರೆ.

ಅವರು ಪುತ್ತೂರಿನಲ್ಲಿ ಮಾತನಾಡಿ, ಇಂದಿರಾ ಕ್ಯಾಂಟೀನ್ ವಿಷಯವನ್ನು ದೊಡ್ಡದು ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿವರು ರಾಜಕಾರಣ ಮಾಡುವುದನ್ನು ಬಿಟ್ಟು ಕೋವಿಡ್ ಸಂದರ್ಭದಲ್ಲಿ ಹಗಲಿರುಳು ವಿವಿಧೆಡೆ ಭೇಟಿ ನೀಡಿ ಕೊರೋನಾ ತಡೆಗಟ್ಟುವಲ್ಲಿ ಪ್ರಯತ್ನಿಸುವ ಶಾಸಕ ಸಂಜೀವ ಮಠಂದೂರು ಅವರ ಕಾರ್ಯವನ್ನು ಅಭಿನಂದಿಸಲಿ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಮತದಾರರನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಗೆ, ರಾಜ್ಯಕ್ಕೆ ಮಾಹಿತಿ ನೀಡಿರುವ ಶಾಸಕರು ಜನರ ವಿಶ್ವಾಸಾರ್ಹಕ್ಕೆ ಒಳಗಾಗಿದ್ದು, ಕಳೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ 31 ಗ್ರಾಪಂಗಳಲ್ಲಿ 25 ಗ್ರಾಪಂ ಬಿಜೆಪಿ ಪಾಲಾಗಿದೆ. ಈ ಮೂಲಕ ಗ್ರಾಮಾಂತರದಲ್ಲಿ ಕಾಂಗ್ರೆಸ್ ಬಲ ಕಳೆದುಕೊಂಡಿದ್ದು, ಮಾಜಿ ಶಾಸಕಿ ಕಾಂಗ್ರೆಸ್ ಪಕ್ಷದಲ್ಲಿ ನೂರಕ್ಕೆ ನೂರು ಪ್ರತಿಶತ ನಾಲಾಯಕು ಎಂಬುದನ್ನು ಮತದಾರರು ಸ್ಪಷ್ಟಪಡಿಸಿದ್ದಾರೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಮಂಜುನಾಥ ಎನ್.ಎಸ್., ರಾಘವೇಂದ್ರ ಭಟ್, ಉದಯ ಎಚ್., ಶಿವರಾಮ ಸಫಲ್ಯ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *