Header Ads
Breaking News

ಮಾಹಿತಿ ನೀಡದೆ ಕಾಮಗಾರಿ ನಡೆಸುವುದರಿಂದ ಅನಾಹುತ : ಶಾಸಕ ಯು.ಟಿ. ಖಾದರ್ ಹೇಳಿಕೆ

ತೌಖ್ತೆ ಚಂಡಮಾರುತದಿಂದ ಹೆಚ್ಚಿನ ಮಳೆಯಾಗಿ ನೇತ್ರಾವತಿಯಲ್ಲಿ ಪ್ರವಾಹ ರೀತಿಯಲ್ಲಿ ನೀರು ಹರಿದು ಹರೇಕಳ – ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಕಾಮಗಾರಿಗೆ ಸುಮಾರು 10 ಕೋಟಿ ರೂ ಹಾನಿಯಾಗಿದ್ದು, ಇಂತಹ ದೊಡ್ಡ ಕಾಮಗಾರಿ ನಡೆಯುವಾಗ ಮಾಹಿತಿ ನೀಡದೆ ಸರಪಾಡಿ ಯ ಹೈಡ್ರೋ ಪವರ್ ಯೋಜನೆಯ ಡ್ಯಾನಿಂದ ಏಕಾಏಕಿ ನೀರು ಹರಿಯಲು ಕಾರಣದ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಬೇಕು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ ಎಂದು ಶಾಸಕ ಯು.ಟಿ. ತಿಳಿಸಿದರು.

ಅವರು ಹರೇಕಳ ಕಡವಿನ ಬಳಿ ಸುಮಾರು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹರೇಕಳದಿಂದ ಅಡ್ಯಾರ್ ಸಂಪರ್ಕಿಸುವ ಬ್ರಿಡ್ಜ್ ಕಂ ಬಆಯರೇಜ್ ನಿರ್ಮಾಣದ ಕಾಮಗಾರಿಗೆ ಆದ ಹಾನಿಯನ್ನು ವೀಕ್ಷಿಸಿ ನಿರ್ಮಾಣ ಕಾಮಗಾರಿ ನಡೆಸುವ ಸಂಸ್ಥೆಯ ಇಂಜಿನಿಯರ್‍ಗಳೊಂದಿಗೆ ಚರ್ಚಿಸಿ ಮಾತನಾಡಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇರುವಾಗ ಈ ಕನಸಿನ ಯೋಜನೆಯನ್ನು ಹೆಚ್ಚಿನ ಮುತುವರ್ಜಿ ವಹಿಸಿ ಇಲ್ಲಿಗೆ ತರಲಾಗಿದೆ. ಜಿ. ಶಂಕರ ನೇತೃತ್ವದ ಬ್ರಿಡ್ಜ್ ನಿರ್ಮಾಣದಲ್ಲಿ ದೇಶದಲ್ಲೇ ಅತ್ಯಂತ ಪ್ರಸಿದ್ಧ ಕಾಮಗಾರಿ ನಡೆಸುವ ಸಂಸ್ಥೆ ಸಮರೋಪಾದಿಯಾಗಿ ಈ ಕಾಮಗಾರಿ ನಡೆಸುತ್ತಿತ್ತು. ಈ ಮಳೆಗಾಲದ ವೇಳೆ ಬ್ರಿಡ್ಜ್‍ನ ಸ್ಲ್ಯಾಬ್ ಜೋಡಿಸುವ ಕಾರ್ಯ ನಡೆದು ಜನರು ಹರೆಏಕಳದಿಂದ ಆಡ್ಯಾರ್ವರೆಗೆ ನಡೆದುಕೊಂಡು ಹೋಗುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಪೂರ್ತಿಯಾಗುತ್ತಿತ್ತು. ಆದರೆ ಏಕಾಏಕಿ ನೇತ್ರಾವತಿಯಲ್ಲಿ ಪ್ರವಾಹದ ರೀತಿಯಲ್ಲಿ ನೀರು ಬಂದು ಎಲ್ಲಾ ಯೋಜನೆಗಳು ತಲೆಕೆಳಗಾಗಿದೆ. ಇದರೊಂದಿಗೆ ನಿರ್ಮಣ ನಡೆಸುವ ಸಂಸ್ಥೆಗೂ 10 ಕೋಟಿ ರೂ.ಗಿಂತ ಅರ್ಥಿಕ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಶೀಘ್ರವೇ ಕಾಮಗಾರಿ ಆರಂಬಿಸುವ ಭರವಸೆ ನೀಡಿದ್ದಾರೆ. ಇಲ್ಲಿ ನಡೆದಿರುವ ಅವಘಡಕ್ಕೆ ಡ್ಯಾಂನಿಂದ ಹೆಚ್ಚುವರಿ ನೀರು ಬಿಟ್ಟಿರುವುದೇ ಕಾರಣವಾಗಿದ್ದು, ನೀರು ಬಿಡುವ ಡ್ಯಾಂನಿಂದ ಕಾಮಗಾರಿ ನಡೆಉವವರಿಗೆ ಮೊದಲೇ ಮಾಹಿತಿ ನೀಡಿದ್ದರೆ ಹೆಚ್ಚಿನ ನಷ್ಟ ತೊಒಇಸಬಹುದಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ?ಕಾರಿಗಳಿಗೆ ತನಿಖೆ ನಡೆಸಲು ತಿಳಿಸಿದ್ದು , ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ. ಶಂಕರ್ ಕಂಪೆನಿಯ ಅಭಿಯಂತರ ಗುರುಮೂರ್ತಿ, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್, ಉಪಾಧ್ಯಕ್ಷ ಕಲ್ಯಾಣಿ, ಸದಸ್ಯರುಗಳಾದ ಅಬ್ದುಲ್ ಸತ್ತಾರ್, ಮಜೀದ್, ಸಿದ್ದೀಖ್, ಹನೀಫ್, ರಫೀಕ್, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಮಲಾರ್, ಝಕರಿಯಾ ಮಲಾರ್, ಅಬ್ದುಲ್ ಹಮೀದ್ , ವಿಶ್ವನಾಥ್ ಪೂಜಾರಿ, ಇಸ್ಮಾಯಿಲ್ ಫರೀದ್ ನಗರ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *