Header Ads
Breaking News

ಮೀನುಗಾರಿಕಾ ಬೋಟ್‍ವುಳ್ಳವರಿಗೆ ಶುಭ ಸುದ್ದಿ

ಈಗಾಗಲೇ ನಾಲ್ಕು ತಿಂಗಳಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‍ಗಳಿಗೆ ಡೀಸೆಲ್ ಸಬ್ಸಿಡಿ ಬಂದಿಲ್ಲ. ಈ ಕುರಿತು ಎ.18ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸರಿಸುಮಾರು 45 ಕೋಟಿ ರೂ. ಸಬ್ಸಿಡಿ ಶೀಘ್ರದಲ್ಲಿಯೇ ಬರುವಂತೆ ಪ್ರಯತ್ನ ಮಾಡುತ್ತೇನೆ ಎಂದು ಮೀನುಗಾರಿಕಾ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್. ಹೇಳಿದರು.

ಅವರು ಮಂಗಳೂರು ಮೀನುಗಾರಿಕಾ ದಕ್ಕೆ ಹಾಗೂ ಕಚೇರಿಗೆ ಭೇಟಿ ಮೀನುಗಾರ ಮುಖಂಡರ ಜತೆಯಲ್ಲಿ ನಡೆದ ಸಭೆಯ ನಂತರ ಮಾತನಾಡಿ, ಕಳೆದ ನಾಲ್ಕು ತಿಂಗಳಿನಿಂದ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಬಂದಿಲ್ಲ. ಕೋವಿಡ್ ಕಾರಣದಿಂದ ಇದು ಆಗಿದೆ. ಈಗ ಮತ್ತೆರಡು ತಿಂಗಳು ಮುಂದೆ ಹೋಗಿದೆ. ಈ ಮೂಲಕ ಸರಿಸುಮಾರು 75 ಕೋಟಿ ರೂ. ಅಗುತ್ತದೆ. ಮೀನುಗಾರಿಕೆ ಮಾಡುವವರಿಗೆ ಇದರಿಂದ ಸಮಸ್ಯೆಯಾಗಿದೆ ಈ ಕುರಿತು ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.

Related posts

Leave a Reply

Your email address will not be published. Required fields are marked *