Header Ads
Breaking News

ಮುದರಂಗಡಿಯಲ್ಲಿ ಮಗು ಬಾವಿಗೆ ಬಿದ್ದು ಮೃತ್ಯು

ಅದಮಾರಿನ ತನ್ನ ಮನೆಯಿಂದ ತಾಯಿಯೊಂದಿಗೆ ಮುದರಂಗಡಿಗೆ ಬಟ್ಟೆ ಖರೀದಿಗೆ ಹೋದ ಮಗುವೊಂದು ಬಟ್ಟೆಯಂಗಡಿಯ ಹಿಂಬದಿಯ ಬಾವಿಗೆ ಬಿದ್ದು ದಾರುಣಾವಾಗಿ ಮೃತಪಟ್ಟ ಘಟನೆ ನಡೆದಿದೆ.


ಮೃತ ಬಾಲಕಿ ಅದಮಾರು ನಿವಾಸಿ ಕೃಷ್ಣ ಎಂಬವರ ಪುತ್ರಿ ಪ್ರಿಯ(03), ಮಗಳಿಗೆ ಹಾಗೂ ತನಗೆ ಬಟ್ಟೆ ಖರೀದಿಗಾಗಿ ಮುದಂಗಡಿಯ ಪೇಟೆಯಲ್ಲಿರುವ ಪುರುಷೋತ್ತಮ ನಾಯಕ್ ಮಾಲಕತ್ವದ ಜಯಲಕ್ಷ್ಮೀ ಬಟ್ಟೆಯಂಗಡಿಗೆ ಅಟೋ ರಿಕ್ಷಾವೊಂದರಲ್ಲಿ ತೆರಳಿದ್ದರು, ಅಟೋ ಅಂಗಡಿ ಮುಂಭಾದಲ್ಲಿ ನಿಲ್ಲಿಸಿ ಮಗಳನೊಂದಿಗೆ ಅಂಗಡಿಯಲ್ಲಿ ಬಟ್ಟೆ ಖರೀದಿಗೆ ತೊಡಗಿದ್ದು, ಒಳಭಾಗದಲ್ಲೇ ಚಿಲ್ಲರೆ ಹಣದಲ್ಲಿ ಆಟವಾಡುತ್ತಿದ್ದ ಮಗು, ಅಂಗಡಿಯ ಹೊರಭಾಗದಲ್ಲಿ ಸೀರೆ ತೊಡಿಸಿ ನಿಲ್ಲಿಸಿದ ಗೊಂಬೆಗೆ ಆಕರ್ಷಿತಳಾಗಿ ಹೊರ ಭಾಗಕ್ಕೆ ತೆರಳಿದೆ. ಸ್ವಲ್ಪ ಹೊತ್ತಲ್ಲಿ ತಾಯಿ ಹೊರಭಾಗಕ್ಕೆ ಹೋಗಿ ನೋಡಿದಾಗ ಮಗು ಅಂಗಡಿ ಮುಂಭಾಗದಲ್ಲೇ ಆಟವಾಡುತ್ತಿತ್ತು, ತಾಯಿ ಒಳ ಬರುತ್ತಿದಂತೆ ಮಗು ಅಂಗಡಿಯ ಬಲಭಾಗಕ್ಕೆ ತೆರಳುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಮಗುವಿಗೆ ಒಂದು ಜೊತೆ ಬಟ್ಟೆ ಹಾಗೂ ತನಗೂ ಒಂದು ಬಟ್ಟೆ ಖರೀದಿ ಮಾಡಿದ ಬಳಿಕ ಮಗುವಿನ ನೆನಪಾಗಿ ಹೊರ ಬಂದು ನೋಡಿದಾಗ ಮಗು ನಾಪತ್ತೆಯಾಗಿತ್ತು. ಎಲ್ಲಾ ಕಡೆ ಹುಡುಕಿದರೂ ಪತ್ತೆ ಇಲ್ಲ, ಬಟ್ಟೆಯಂಗಡಿಯ ಸಿಬ್ಬಂದಿ ಯುವತಿ ತನ್ನ ಗೆಳತಿಯೊಂದಿಗೆ ಅಂಗಡಿಯ ಹಿಂಬದಿಗೆ ಹೋಗಿ ಹುಡುಕಾಟ ನಡೆಸಿದ್ದು ಅಂತಿಮವಾಗಿ ಸುಮಾರು ಐವತ್ತು ಅಡಿ ಆಳದ ಬಾವಿಗೆ ಇಣುಕಿದಾಗ ಮಗುವಿನ ಕೈಯಲ್ಲಿದ್ದ ಪರ್ಸ್ ನೀರಲ್ಲಿ ತೇಲುತ್ತಿದನ್ನು ಗಮನಿಸಿದ್ದಾರೆ ಆ ಯುವತಿಯರು. ಆದರೆ ಅದು ಅಸ್ಪಷ್ಟವಾಗಿ ಗೊಚರಿಸುತ್ತಿದ್ದರಿಂದ ಅದು ಪ್ಪಾಸ್ಟಿಕ್ ಚೀಲ ಎಂಬುದಾಗಿ ಅಲ್ಲಿದ್ದವರು ಬೇರೆಡೆ ಹುಡುಕಾಟಕ್ಕೆ ತೊಡಗಿದ್ದಾರೆ.


ಕೆಲ ಹೊತ್ತಿನ ಹಿಂದೆಯಷ್ಟೇ ಈ ಭಾಗದಲ್ಲಿ ಹಕ್ಕಿ ಪಿಕ್ಕಿ ಜನಾಂಗದ ಇಬ್ಬರು ಮಹಿಳೆಯರು ಗೋಣಿಚೀಲದೊಂದಿಗೆ ಕಾಣಿಸಿಕೊಂಡಿದ್ದರಿಂದ, ಅವರು ಮಗುವನ್ನು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತವಾದ ಹಿನ್ನಲೆಯಲ್ಲಿ ಅವರ ಹುಡುಕಾಟಕ್ಕೆ ಮುಂದಾದರು ಕೆಲವರು. ಮಗು ಎಲ್ಲೂ ಕಾಣ ಸಿಗದಿದ್ದಾಗ, ಮಗು ಕಾಣೆಯಾಗಿ ಐದು ನಿಮಿಷಗಳಲ್ಲೇ ಬಾವಿಯಲ್ಲಿ ಪರ್ಸ್ ಕಂಡದರ ಬಗ್ಗೆ ಗಮನ ಹರಿಸಿ ಸ್ಥಳೀಯ ಯುಪಿಸಿಎಲ್ ಕಂಪನಿಯ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬಂದು ಕಾರ್ಯಾಚರಣೆ ಆರಂಭಿಸಿದರಾದರೂ ಮುಳುಗು ತಜ್ಞರಿಲ್ಲದ ಪರಿಣಾಮ ಪ್ರಯೋಜನಕ್ಕೆ ಬಂದಿಲ್ಲ. ಆ ಬಳಿಕ ಅಲ್ಲಿಗೆ ಆಗಮಿಸಿದ ದೆಂದೂರಿನ ಮುಳುಗು ತಜ್ಞ ಅಶೋಕ್ ಶೆಟ್ಟಿ ಸುಮಾರು ೨೫ ಅಡಿ ಆಳದ ನೀರಿಗೆ ಹಾರಿ ಕೆಲವೇ ಕ್ಷಣದಲ್ಲಿ ಮಗುವನ್ನು ಮೇಲತ್ತಲು ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು.


ಆರಂಭದಲ್ಲಿ ಯುವತಿಯರು ಪರ್ಸ್ ಬಗ್ಗೆ ತಿಳಿಸದಾಗಲೇ ಕಾರ್ಯಚರಿಸಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇತ್ತೆನ್ನುತ್ತಾರೆ ಕೆಲವರು, ಬಟ್ಟೆಯಂಗಡಿಯ ಕಟ್ಟಡದ ಪಕ್ಕದಲ್ಲಿ ಕಿರಿದಾದ ದಾರಿಯೊಂದಿದ್ದು, ಅದಕ್ಕೆ ಗೇಟ್ ಇದ್ದರೂ ಅದು ಸದಾ ಹೊತ್ತು ತೆರೆದು ಕೊಂಡಿರುತ್ತಿತ್ತು, ಕಾರಣ ಶೌಚಾಲಯಕ್ಕೆ ದಾರಿ ಅದಾಗಿತ್ತು. ತೆರೆದು ಕೊಂಡಿರುವ ದಾರಿಯಲ್ಲಿ ಮುಂದೋದ ಮಗು ನೇರವಾಗಿ ಬಾವಿ ಕಡೆಗೆ ತೆರಳಿದೆ, ಬಾವಿಗೆ ಒಂದು ಭಾಗದಲ್ಲಿ ಉಕ್ಕಿನ ಜಾಲಿ ನಿರ್ಮಿಸಿ ಭದ್ರ ಪಡಿಸಿಲಾಗಿದ್ದರೂ, ಮತ್ತೊಂದು ಕಡೆಯಿಂದ ಅತೀ ತುಗ್ಗು ಆವರಣಗೋಡೆ ಇದ್ದು ಯಮದರ್ಶನಕ್ಕೆ ದಾರಿ ಎಂಬಂತ್ತೆ ಭಾಸವಾಗುತ್ತಿತ್ತು, ಅದೇ ಭಾಗದಲ್ಲಿದ್ದ ಮಗು ಮರಳಿ ತಾಯಿಯಿದ್ದಲ್ಲಿಗೆ ಬರಲು ದಾರಿಕಾಣದೆ ಬಾವಿಯ ದಂಡೆ ಏರಲು ಹೋಗಿ ಬಾವಿಯೋಳಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗುತ್ತಿದ್ದರೂ, ಆ ಕಿರಿದಾದ ದಾರಿಯಲ್ಲ್ಲಿ ಯಾವುದೇ ಆಕರ್ಷಣಿಯ ವಸ್ತುಗಳಿಲ್ಲ ಭಾಗಕ್ಕೆ ಹೋಗುವ ಪ್ರಮೇಯ ಕಂಡಿತಾ ಇಲ್ಲ.. ಏನೋ ಆಗ ಬಾರದು ನಡೆದಿದೆ ಎನ್ನುತ್ತಾರೆ ಮಗುವಿನ ಸಂಬಂಧಿಗಳು. ಅದೇನೋ ನಡೆದಿದ್ದರೂ ಪ್ರಪಂಚದ ಪರಿವೆಯೇ ಇಲ್ಲದೆ ತನ್ನ ಬಾಲ್ಯದಾಟದಲ್ಲಿ ನಿರತವಾಗಿದ್ದ ಪುಟ್ಟ ಕಂದಮ್ಮ ತಂದೆತಾಯಿ ಸಹಿತ ಸಂಬಂಧಿಗಳನ್ನು ಶೋಕದ ಕಡಲಲ್ಲಿ ತೇಲಿ ಬಿಟ್ಟು, ಮರಳಿ ಬಾರದ ಲೋಕಕ್ಕೆ ತೆರಳಿದ್ದು ವಿಧಿಯಾಟವಲ್ಲದೆ ಬೇರೆನು..?
ವರದಿ-ಸುರೇಶ್ ಎರ್ಮಾಳ್

Related posts

Leave a Reply

Your email address will not be published. Required fields are marked *