Header Ads
Breaking News

ಮುಸೋಡಿ ಕಡಪ್ಪುರ ಕಡಲ್ಕೊರೆತ : ಮನೆಗಳು ಸಂಪೂರ್ಣ ಕುಸಿತ

ಮಂಜೇಶ್ವರ: ಉಪ್ಪಳ ಮುಸೋಡಿ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಎರಡು ಮನೆಗಳು ಕುಸಿದು ಬಿದ್ದು ಸಂಪೂರ್ಣವಾಗಿ ನಾಶಗೊಂಡಿದೆ.ಮುಸೋಡಿ ಕಡಪ್ಪುರ ನಿವಾಸಿಗಳಾದ ಮಾರಿಯಮ್ಮ, ತಸ್ಲೀಮಾ ಮೂಸಾ ಎಂಬಿವರ ಮನೆಗಳು ಕುಸಿದು ಬಿದ್ದು ನಾಶಗೊಂಡಿವೆ. ಇದೀಗ ಸುಮಾರು ಹತ್ತರಷ್ಟು ಮನೆಗಳು ಕಡಲಾಕ್ರಮಣದ ಭೀತಿಯಲ್ಲಿದೆ. ಎರಡು ವಾರಕ್ಕೆ ಮುಂಚಿತವಾಗಿ ಉಂಟಾದ ಕಡಲ್ಕೊರೆತದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದವು. ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಕಡಲಾಕ್ರಮಣ ತೀವ್ರಗೊಂಡಿದೆ. ಜಿಲ್ಲಾಡಳಿತ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *