Header Ads
Breaking News

ಮೂಡುಬಿದರೆ : ಕಾನೂನನ್ನು ಮುರಿದರೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ

ಕೊರೊನಾ ನಿಯಂತ್ರಣಕ್ಕಾಗಿ ದ.ಕ ದಲ್ಲಿ ಟಫ್ ರೂಲ್ಸ್ ಜಾರಿ ಹಿನ್ನಲೆಯಲ್ಲಿ ಮೂಡುಬಿದಿರೆಯಲ್ಲಿ ಬೆಳಿಗ್ಗೆ 6.30ರಿಂದಲೇ ಅಂಗಡಿ- ಮುಂಗಟ್ಟು, ತರಕಾರಿ, ಹೂವಿನ ಅಂಗಡಿ ಮತ್ತು ಮೆಡಿಕಲ್‍ಗಳಲ್ಲಿ ಜನತೆ ಅಗತ್ಯ ವಸ್ತುಗಳ ಖರೀದಿಗೆ ಅಗಮಿಸಿದ್ದರು.ವ್ಯಾಪಾಸ್ಥರು 9 ಗಂಟೆಯೊಳಗೆ ವ್ಯವಹಾರವನ್ನು ನಿಲ್ಲಿಸುವಂತೆ ಮತ್ತು ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಬೇಕೆಂದು ಹಾಗೂ ಕಾನೂನನ್ನು ಮುರಿದರೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಧ್ವನಿವರ್ಧಕದ ಮೂಲಕ ಎಚ್ಚರಿಕೆಯನ್ನು ನೀಡಿದರು.

ವ್ಯವಹಾರವನ್ನು ಮುಗಿಸಲು ಸಮಯ ಹತ್ತಿರವಾಗುತ್ತಿದ್ದಂತೆ ಅಂಗಡಿ ಮುಂಗಟ್ಟುಗಳ ಮಾಲಕರು ಅಂಗಡಿಗಳ ಶಟರ್ ಗಳನ್ನು ಎಳೆದು ನಿಲ್ಲಿಸಿದರು. ಮತ್ತು ಜನರು ಕೊಡು ಕೊಳ್ಳುವಿಕೆಯನ್ನು ನಿಲ್ಲಿಸಿ ವ ವೇಗವಾಗಿ ತಮ್ಮ ಮನೆಯತ್ತ ಧಾವಿಸುತ್ತಿರುವುದು ಕಂಡು ಬಂತು ಒಟ್ಟಾರೆಯಾಗಿ ಮೂಡುಬಿದಿರೆಯಲ್ಲಿ ಪೊಲೀಸರ ದಂಡದ ಹೆದರಿಕೆಯಿಂದಲೋ ಏನೋ ಜನರು ಲಾಕ್ ಡೌನ್ ನಿಯಮಗಳನ್ನು ಪಾಲಿಸುವ ಮೂಲಕ ಗಮನ ಸೆಳೆದರು.

 

Related posts

Leave a Reply

Your email address will not be published. Required fields are marked *