Header Ads
Breaking News

ಮೂಡುಬಿದಿರೆಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಮೂಡುಬಿದಿರೆ : ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈತರು ಏಳು ತಿಂಗಳುಗಳಿಂದ ಪ್ರತಿಭಟನೆ ನಡೆಸಿದರೂ ಪ್ರದಾನಿ ಮೋದಿ ರೈತರ ಅಹವಾಲು ಕೇಳಲು ಸಿದ್ಧರಿಲ್ಲ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ಆರೋಪಿಸಿದರು.ರೈತ, ದಲಿತ, ಕಾರ್ಮಿಕ ಹಾಗೂ ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಇಲ್ಲಿನ ತಹಶಿಲ್ದಾರ್ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಮೂರು ಕೃಷಿ ಕಾಯ್ದೆಗಳನ್ನು ಸರಕಾರ ರದ್ದುಪಡಿಸಿದದಿದ್ದಲ್ಲಿ ಭವಿಷ್ಯದಲ್ಲಿ ರೈತರು ತಮ್ಮಲ್ಲಿದ್ದ ಭೂಮಿಗಳನ್ನು ಕಳಕೊಂಡು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.ಕಳೆದ ಹತ್ತು ತಿಂಗಳಲ್ಲಿ ದೇಶದಲ್ಲಿ ಪೆಟ್ರೋಲ್, ಡಿಸೇಲ್‌ನಿಂದ ಸುಮಾರು ಎರಡು ಲಕ್ಷದ ೯೫ ಸಾವಿರ ಕೋಟಿ ರೂ ಸಂಗ್ರಹವಾಗಿದೆ. ಆದರೆ ತೈಲ ಕಂಪೆನಿಗಳಿಗೆ ಸರಕಾರ ಬಾಕಿ ಪಾವತಿಸಿದ್ದು ಸುಮಾರು ೭೫ ಸಾವಿರದ ಏಳುನೂರು ಕೋಟಿ ಮಾತ್ರ. ಆದರೆ ಬಿಜೆಪಿ ಕಾರ್‍ಯಕರ್ತರು ಈ ವಿಷಯದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿದ್ದಾರೆ ಎಂದರು.
ಕೋವಿಡ್ ನಿಯಂತ್ರಣದಲ್ಲಿ ಮೋದಿ ಸರಕಾರ ವಿಫಲವಾದ ಪರಿಣಾಮ ದೇಶದಲ್ಲಿ ೪ ಲಕ್ಷ ಜನ ಸಾವನಪ್ಪಿದ್ದಾರೆ. ಮೃತ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.


ಕರ್ನಾಕಟ ಪ್ರಾಂತ ರೈತ ಸಂಘದ ಪ್ರಮುಖರಾದ ಅಲ್ವಿನ್ ಮಿನೇಜಸ್, ಲಿಯೋ ನಝರತ್, ರೋನಿ ಮೆಂಡೋನ್ಸಾ, ಸಿಐಟಿಯು ಅಧ್ಯಕ್ಷರಾದ ರಮಣಿ ಪ್ರಮುಖರಾದ ಸುಂದರ ಶೆಟ್ಟಿ, ಕೃಷ್ಣಪ್ಪ ರಾಧ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

Related posts

Leave a Reply

Your email address will not be published. Required fields are marked *