Header Ads
Breaking News

ಮೂದೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ : ಮನೆಯಂಗಳದಲ್ಲೇ ವ್ಯಕ್ತಿಯ ಆಂತ್ಯಕ್ರಿಯೆ

ಉಡುಪಿ: ಈ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ. ಹೀಗಾಗಿ ಮನೆಯಂಗಳದಲ್ಲೇ ವ್ಯಕ್ತಿಯ ಆಂತ್ಯಕ್ರಿಯೆ ಮಾಡಿದ ಬಡ ಕುಟುಂಬ .ಕುಂದಾಪುರದ ಜಡ್ಕಲ್ ಗ್ರಾಮ ಪಂಚಾಯತ್ ನಲ್ಲಿ ಮೂದುರಿನ ಜನರ ಸಮಸ್ಯೆಗೆ ಪರಿಹರಿಸುವರೇ ಇಲ್ಲ.

ಹೌದು ..ಉಡುಪಿ ಜಿಲ್ಲೆಯ ಕುಂದಾಪುರದ ಜಡ್ಕಲ್ ಗ್ರಾಮದ ಮೂದೂರಿನ ಗ್ರಾಮಸ್ಥರಿಗೆ ಅಂತ್ಯ ಸಂಸ್ಕರಕ್ಕೇಂದು ರುದ್ರಭೂಮಿಯೇ ಇಲ್ಲ. ಗ್ರಾಮದಲ್ಲಿ ಯಾರಾದ್ರೂ ಮೃತರಾದ್ರೆ ಬೇರೆ ಅಂತ್ಯ ಸಂಸ್ಕಾರ ಮಾಡಲು ಬೇರೆ ಗ್ರಾಮದ ಸ್ಮಶನಗಳನ್ನು ಅವಲಂಬಿಸಬೇಕು.ಕೋವಿಡ್ ಲಾಕ್ ಡೌನ್ ನಲ್ಲಂತೂ ಮೃತ ಪಟ್ಟ ವ್ಯಕ್ತಿಗಳ ಶವ ಸಂಸ್ಕಾರ ಮಾಡುವುದು ಇನ್ನೂ ಕಷ್ಟವಾಗಿದೆ.

ತೀವ್ರ ಅಸೌಖ್ಯದಿಂದ ಮೃತ ಪಟ್ಟ ಇದೇ ಗ್ರಾಮದ ವ್ಯಕ್ಯಿಯ ಶವ ಸಂಸ್ಕಾರಕ್ಕೆ ಕುಟುಂಬಸ್ಥರು ಪರದಾಡಬೇಕಾಯಿತು.ಗ್ರಾಮದಲ್ಲಿ ಸ್ಮಶಾನ ಇಲ್ಲ.ದೂರದ ಊರಿಗೆ ಶವ ಕೊಂಡಯ್ಯಲು ಲಾಕ್ ಡೌನ್ ಬೇರೆ.ಹೀಗಾಗಿ ವಿಧಿಯಲ್ಲದೇ ಮನೆ ಅಂಗಳದಲ್ಲೇ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಬಡ ಕುಟುಂಬಸ್ಥರು ಮಾಡಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ಪಂಚಾಯತ್ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ.ಹಲವು ವರುಷಗಳಿಂದ ಗ್ರಾಮದಲ್ಲಿ ಇಂತಹ ಸಮಸ್ಯೆ ಇದ್ರೂ ರುದ್ರಭೂಮಿಯನ್ನು ನಿರ್ಮಿಸಿಕೊಟ್ಟಿಲ್ಲ.ಜನರು ಮನೆಯಂಗಳದಲ್ಲೇ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ಬಂದೊದಗಿದೆ.ಕೂಡಲೇ ಗ್ರಾಮಕ್ಕೊಂದು ರುದ್ರಭೂಮಿ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *