Header Ads
Breaking News

ರಸ್ತೆ ಮಧ್ಯೆ ಕೈ ಕೊಟ್ಟ ಕಾರು : ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ ಎಎಸ್‍ಐ

ಮಧ್ಯರಾತ್ರಿ ವೇಳೆ ಗರ್ಭಿಣಿಯನ್ನು ಕರೆದುಕೊಂಡು ಬರುತ್ತಿದ್ದ ಕಾರು ಕೆಟ್ಟುಹೋದ ಸಂದರ್ಭ, ಗಸ್ತು ಪೊಲೀಸರು ತಮ್ಮ ವಾಹನದಲ್ಲಿಯೇ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಳೆದ ಶುಕ್ರವಾರ ರಾತ್ರಿ 1.15ರ ಸುಮಾರಿಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‍ಐ ಹರೀಶ್ ಮತ್ತು ಸಿಪಿಸಿ ವಿಜಯ್ ಕುಮಾರ್ ಅವರು ಅರ್ಕುಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದರು. ಗುರುವಾಯನಕೆರೆಯ ಸಿದ್ದಿಕ್ ಎಂಬವರ ತುಂಬು ಗರ್ಭಿಣಿ ಪತ್ನಿ ಶಾಹೀದಾ ಬಾನು ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಲು ಈ ಮಾರ್ಗವಾಗಿ ಬರುತ್ತಿದ್ದರು.


ಅರ್ಕುಳ ಬಳಿ ಅವರ ಕಾರು ಕೆಟ್ಟು ಹೋಗಿದ್ದು, ಅದೇ ಪ್ರದೇಶದಲ್ಲಿ ಬರುತ್ತಿದ್ದ ಪೊಲೀಸರು ಅವರನ್ನು ಕಂಡು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪೊಲೀಸರ ಕಾರ್ಯವನ್ನು ಮೆಚ್ಚಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಇಬ್ಬರು ಸಿಬ್ಬಂದಿಯನ್ನು ಸನ್ಮಾನಿಸಿದರು. ಇವರ ಈ ಕಾರ್ಯಕ್ಕೆ ಕಮಿಷನರ್ ಅವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *