Header Ads
Breaking News

ರಾಜ್ಯದಲ್ಲಿ ಫಂಗಸ್ ಪ್ರಕರಣಗಳು ಉಲ್ಬಣವಾಗದಂತೆ ಎಚ್ಚರಿಕೆ ವಹಿಸಿ :ಮಾಜಿ ಸಚಿವ ರಮಾನಾಥ ರೈ

ಬ್ಲಾಕ್, ವೈಟ್ ಬಳಿಕ ಇದೀಗ ಯೆಲ್ಲೋ ಫಂಗಸ್ ಪ್ರಕರಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇದು ಉಲ್ಬಣವಾಗದಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ. ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವ್ರು, ಕೊರೋನಾದಂತೆ ಫಂಗಸ್‍ಗಳ ಚಿಕಿತ್ಸೆಯನ್ನೂ ಆಯುಷ್ಮಾನ್ ಭಾರತ್ ಹಾಗೂ ವಿಮಾ ಯೋಜನೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಈ ಫಂಗಸ್‍ಗಳ ಚಿಕಿತ್ಸೆಗೆ ಅಗತ್ಯವಾದ ಆ್ಯಂಪೊಟೆರಿಸಿನ್ ಬಿ ಔಷಧಿ ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಕೊರತೆ ಇದೆ. ಮಂಗಳೂರು ನಗರದ ಆಸ್ಪತ್ರೆಯ ವೈದ್ಯರೂ ಈ ಸೋಂಕಿನ ಚಿಕಿತ್ಸೆಗೆ ತಮ್ಮ ಬಳಿ ಔಷಧಿ ಇಲ್ಲ ಎಂದು ಕೈಚೆಲ್ಲುತ್ತಿದ್ದಾರೆ. ತನಗೂ ಈ ಫಂಗಸ್ ಸೋಂಕಿತ ಮಹಿಳೆಯೊಬ್ಬರ ಮನೆಯವರು ಕರೆ ಮಾಡಿ ಔಷಧಿ ಒದಗಿಸುವಂತೆ ಕೋರಿಕೊಂಡಿರುವುದು ಅಪಾಯದ ಸೂಚನೆಯನ್ನು ನೀಡಿದೆ. ಕೊರತೆ ಆಗದಂತೆ ಕ್ರಮ ವಹಿಸುವುದು ಸರಕಾರದ ಹೊಣೆಗಾರಿಕೆ. ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ರು. ಇನ್ನು ಕೊರೋನ ನಿಯಂತ್ರಣ ಹಿನ್ನೆಲೆಯಲ್ಲಿ ಸರಕಾರದ ಕಠಿಣ ನಿಯಮಗಳು, ಲಾಕ್‍ಡೌನ್, ಖರೀದಿಗೆ ಸಮಯಾವಕಾಶದ ಅವಧಿ ಅಸಮರ್ಪಕವಾಗಿದೆ. ಜನರು ಬೀದಿಗೆ ಬಾರದಂತೆ ಮಾಡಬೇಕಾದರೆ ಸಂಪೂರ್ಣ ಲಾಕ್‍ಡೌನ್ ಮಾಡಿ ಅಗತ್ಯ ವಸ್ತುಗಳ ಕಿಟ್‍ಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂದು ಅವರು ಹೇಳಿದರು.


ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಅಪ್ಪಿ, ಭಾಸ್ಕರ ಕೆ., ನವೀನ್ ಡಿಸೋಜಾ, ವಿಶ್ವಾಸ್ ಕುಮಾರ್, ಗಣೇಶ್‍ಪೂಜಾರಿ, ಸದಾಶಿವ ಉಳ್ಲಾಲ್, ಸುರೇಂದ್ರ ಕಾಂಬ್ಲಿ, ಪ್ರಕಾಶ್ ಸಾಲ್ಯಾನ್, ಶುಬೋದಯ ಆಳ್ವ, ಶಬೀರ್, ಮುಸ್ತಫಾ, ಆರಿಫ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *