Header Ads
Breaking News

ರಾಜ್ಯಾದ್ಯಂತ ನಾಳೆಯಿಂದ 14ದಿನ ಸಂಪೂರ್ಣ ಲಾಕ್‍ಡೌನ್…!, ಏನೇನಿದೆ..? ಏನೇನಿರಲ್ಲ..?

ರಾಜ್ಯಾದ್ಯಂತ ನಾಳೆಯಿಂದ 14ದಿನ ಸಂಪೂರ್ಣ ಲಾಕ್‍ಡೌನ್ ಮಾಡಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಈ ಬಗ್ಗೆ ಸಿಎಂ ಬಿಎಸ್‍ವೈ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ರು. ನಾಳೆಯಿಂದ ರಾಜ್ಯ ಸಂಪೂರ್ಣ ಬಂದ್ ಆಗಲಿದೆ. ಬೆಳಗ್ಗೆ 6ರಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ಈ ಕಫ್ರ್ಯೂ ಜಾರಿಯಲ್ಲಿರುತ್ತೆ. ರಾಜ್ಯದಲ್ಲಿ ಲಾಕ್‍ಡೌನ್ 15 ದಿನಕ್ಕೆ ಮುಗಿಯೋದಿಲ್ಲ. ಪರಿಸ್ಥಿತಿ ಹತೋಟಿಗೆ ಬರದಿದ್ರೆ ಮತ್ತೊಂದು ವಾರ ಲಾಕ್‍ಡೌನ್ ಆಗಲಿದೆ. ಇನ್ನು ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗೆ ವಿನಾಯಿತಿ ನೀಡಲಾಗಿದೆ. ಮದ್ಯ (ಲಿಕ್ಕರ್)ವನ್ನು ಬೆಳಗ್ಗಿನ ಅವಧಿಯಲ್ಲಿ ಪಾರ್ಸೆಲ್ ಪಡೆಯಲು ಅವಕಾಶ ನೀಡಲಾಗಿದೆ. ಇನ್ನು ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸಂಚಾರ ಕೂಡಾ ಇರೋದಿಲ್ಲ. ಇನ್ನು ಮೇ.1ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷದೊಳಗಿನವರೆಗೆ ಉಚಿತ ಲಸಿಕೆ ನೀಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಇನ್ನು ಆರು ತಿಂಗಳು ಎಲ್ಲಾ ಚುನಾವಣೆಗಳನ್ನು ಮುಂದೂಡುವಂತೆ ಶಿಫಾರಸ್ಸು ಮಾಡಿರೋದಾಗಿ ಸ್ಪಷ್ಟ ಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *