Header Ads
Breaking News

ರಾಜ್ಯ ಹೆದ್ದಾರಿಗೆ ಟೋಲ್‌ಗೇಟ್ ಹುನ್ನಾರ_ಸಾರ್ವಜನಿಕರಿಂದ ಆಕ್ರೋಶ

ಕಾರ್ಕಳ- ಪಡುಬಿದ್ರಿ ರಾಜ್ಯ ಹೆದ್ದಾರಿಗೆ ಟೋಲ್ ಗೇಟ್ ನಿರ್ಮಾಣ ಮಾಡಲು ಗುಪ್ತ ವಾಹನ ಸರ್ವೇ ನಡೆಸಲು ಬಂದ ಯುಪಿ ಮೂಲದ ಆರು ಮಂದಿಯನ್ನು ಸಾರ್ವಜನಿಕರು ಓಡಿಸಿದ ಘಟನೆ ಪಡುಬಿದ್ರಿಯ ಕಂಚಿನಡ್ಕ ಎಂಬಲ್ಲಿ ನಡೆದಿದೆ.

 ಯುಪಿ ಮೂಲದ ಆರು ಮಂದಿಯ ತಂಡ ಕಳೆದ ಹತ್ತು ದಿನಗಳ ಹಿಂದೆ ಕಂಚಿನಡ್ಕದ ಬಾಡಿಗೆ ಮನೆಯಲ್ಲಿ ಬೀಡುಬಿಟ್ಟಿದ್ದು, ಮೂರು ದಿನಗಳಿಂದ ಹೆದ್ದಾರಿ ಪಕ್ಕದ ಮರದಡಿಯಲ್ಲಿ ಗುಪ್ತವಾಗಿ ವಾಹನ ಸರ್ವೇ ನಡೆಸುತ್ತಿದ್ದರು, ಈ ಬಗ್ಗೆ ಸಂಶಯ ಬಂದು ಪಡುಬಿದ್ರಿ ಗ್ರಾ.ಪಂ.ಸದಸ್ಯ ನವೀನ್ ಶೆಟ್ಟಿ, ಅವರನ್ನು ವಿಚಾರಿಸಿದಾಗ ಸತ್ಯ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರಿಗೆ ವಿಚಾರ ತಿಳಿದ್ದಾರೆ. ಸ್ಥಳದಲ್ಲಿ ಜನ ಸೇರುತ್ತಿದಂತೆ ತಮ್ಮ ಅಕ್ರಮ ಕಾರ್ಯಚರಣೆ ಸ್ಥಗಿತಗೊಳಿಸಿದ ತಂಡ ಪಲಾಯನ ಮಾಡಲು ಯತ್ನಿಸಿದಾಗ ಅವರಲ್ಲಿದ್ದ ದಾಖಲೆಪತ್ರಗಳನ್ನು ಪರಿಶೀಲಿಸಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಅಕ್ರಮವಾಗಿ ನಡೆಸಿದ ಸುಮಾರು ಒಂದು ಗೋಣಿದಷ್ಟಿದ ಸರ್ವೇ ದಾಖಲೆ ಪತ್ರಗಳನ್ನು ಸ್ಥಳದಲ್ಲೇ ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಯುಪಿ ಮೂಲದ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಠಾಣೆಯ ಮುಂದೆ ಜಮಾಯಿಸಿದ ಸಾರ್ವಜನಿಕರ ಮಾತೊಂದೇ ನಮ್ಮ ಪ್ರಾಣ ಹೋದರೂ ರಾಜ್ಯ ಹೆದ್ದಾರಿಗೆ ಟೋಲ್ ಗೇಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ, ರಾಷ್ಟ್ರೀಯ ಹೆದ್ದಾರಿಗೆ ಮಾಹಿತಿ ಇಲ್ಲದೆ ಟೋಲ್ ಪ್ಲಾಜಾ ನಡೆಸಲು ಅವಕಾಶ ನೀಡಿ ಸಂಕ? ಅನುಭವಿಸಿದ್ದೇ ಸಾಕು ಎನ್ನುತ್ತಾರೆ.

Related posts

Leave a Reply

Your email address will not be published. Required fields are marked *