Header Ads
Breaking News

ರಿಕ್ಷಾ ಪರವಾನಗಿಗಳಿಗೆ ತಡೆಯಾಜ್ಞೆ ಇರುವುದಿಲ್ಲ : ಬಿ.ವಿಷ್ಣುಮೂರ್ತಿ

# ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಿಕ್ಷಾ ಘಟಕದಿಂದ ಅಪಪ್ರಚಾರ- ಪರವಾನಗಿ ರದ್ಧತಿ-ತಡೆ ಇತ್ಯಾದಿ ಯಾವುದೇ ಆದೇಶವನ್ನು ಹೈಕೋರ್ಟ್ ನೀಡಿಲ್ಲ. ಇಲಾಖೆ ಕಳೆದ 30 ವರ್ಷಗಳಲ್ಲಿದ್ದಂತೆ ಪರವಾನಗಿ ವರ್ಗಾವಣೆ ಮಾಡದಿದ್ದರೆ ಚಳವಳಿ ಅನಿವಾರ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಿ. ವಿಷ್ಣುಮೂರ್ತಿ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ ಒಂದೆರಡು ವರ್ಷದಿಂದ ಅಟೋ ರಿಕ್ಷಾ ಪರವಾನಗಿಯ ವರ್ಗಾವಣೆಯನ್ನು ಸಾರಿಗೆ ಪ್ರಾಧಿಕಾರ ನಿಲ್ಲಿಸಿದೆ. ಇದರಿಂದಾಗಿ ನಗರದ ಬಡ ರಿಕ್ಷಾ ಚಾಲಕ-ಮಾಲಕರು ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದೆ. ರಕ್ಷಣಾ ವೇದಿಕೆ ಘಟಕವು ಎರಡೆರಡು ಸುದ್ದಿಗೋಷ್ಠಿ ನಡೆಸಿ ನಡೆಸಿ, ರಿಕ್ಷಾ ಚಾಲಕರಲ್ಲಿ ಪರವಾನಗಿ ರದ್ಧತಿ ತಡೆ, ಎಂಬ ರೀತಿ ಸುಳ್ಳು ಹೇಳಿಕೆ ನೀಡಿ ಗೊಂದಲವನ್ನುಂಟು ಮಾಡಿದೆ. ಯಾವುದೇ ರಿಕ್ಷಾ ಪರವಾನಗಿಗಳಿಗೆ, ಹೈಕೋರ್ಟ್ ನಿಂದ ತಡೆಯಾಜ್ಞೆ ಇರುವುದಿಲ್ಲ. ರದ್ಧತಿಯ ಆದೇಶವೂ ಇಲ್ಲ. ಆದುರಿಂದ ರಿಕ್ಷಾ ಚಾಲಕ ಮಾಲಕರು ಮಂಗಳೂರು ನಗರದಲ್ಲಿ ನಿರಾತಂಕದಿಂದ ಪರವಾನಗಿ ನವೀಕರಣ ವರ್ಗಾವಣೆ ಗೊಳಿಸಬಹುದು ಎಂಬುವುದನ್ನು ನಮ್ಮ ಸಂಘವು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ಕೋಶಾಧಿಕಾರಿ ಚಂದ್ರಹಾಸ ಕುಲಾಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *