Header Ads
Breaking News

DR PADMANABHA KAMATH CHOOSEN FOR ROTARY VANDANA AWARD 2020

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ರಾಜ್ಯಮಟ್ಟದ ವಾರ್ಷಿಕ ಪ್ರತಿಷ್ಠಿತ ’ವಂದನಾ ಪ್ರಶಸ್ತಿಗೆ ಖ್ಯಾತ ವೈದ್ಯರಾದ ಡಾ. ಪದ್ಮನಾಭ ಕಾಮತ್ ಅವರು ಆಯ್ಕೆಯಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ವಿ4 ನ್ಯೂಸ್ ಕರ್ನಾಟಕ ಚಾನೆಲ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಮೇ 28ರಂದು ಸಂಜೆ 6 ಗಂಟೆಗೆ ನೇರಪ್ರಸಾರವಾಗಲಿದೆ.
ರೋಟರಿ ಅಂತರರಾಷ್ಟ್ರೀಯ ಜಿಲ್ಲಾ3181 ಗವರ್ನರ್ ಮೇಜರ್ ಡೋನರ್ ರೋಟರಿಯನ್ ಎಂ. ರಂಗನಾಥ್ ಭಟ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ರೋಟರಿಯನ್ ಪ್ರಕಾಶ್ಚಂದ್ರ ಅಧ್ಯಕ್ಷತೆ ವಹಿಸಲಿರುವರು. ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿಯ ಅಧ್ಯಕ್ಷ ರೋಟರ್‍ಯಾಕ್ಟ್ ಡೆರಿಲ್ ಸ್ವೀವನ್ ಡಿಸೋಜಾ ಪಾಲ್ಗೊಳ್ಳಲಿರುವರು ಎಂದು ಸಮಿತಿಯ ಸಭಾಪತಿಯವರಾದ ರೋಟರಿಯನ್ ಡಾ. ದೇವದಾಸ್ ರೈ ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *