Header Ads
Breaking News

ರೌಡಿ ಶೀಟರ್‍ಗಳಿಂದಲೇ ಸನ್ಮಾನ ಮಾಡಿಸಿಕೊಂಡ ಇನ್ಸ್‍ಪೆಕ್ಟರ್ : ಸಾರ್ವಜನಿಕರ ಆಕ್ರೋಶ

ರೌಡಿ ಶೀಟರ್‍ಗಳಿಂದ ಇನ್ಸ್‍ಪೆಕ್ಟರ್ ಓರ್ವರು ಸನ್ಮಾನ ಮಾಡಿಸಿಕೊಂಡ ಫೋಟೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಅಗಿದೆ. ಉಡುಪಿಯ ಹಿರಿಯಡ್ಕ ಠಾಣ ಎಸ್‍ಐ ಹಿರಣ್ಣ ಅವರು ರೌಡಿ ಶೀಟರ್ ಗಳಾದ ಪ್ರಸಾದ್ ಕೊಂಡಾಡಿ ಮತ್ತು ಉಮೇಶ್ ಶೆಟ್ಟಿ ಎನ್ನುವ ರೌಡಿ ಶೀಟರ್‍ಗಳಿಂದ ಠಾಣೆಯಲ್ಲೇ ಸನ್ಮಾನ ಮಾಡಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ ಕಾರ್ಯಕ್ರಮವನ್ನು ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೊವೀಡ್ ನಿಯಮವಳಿಗಳನ್ನು ಉಲ್ಲಂಘಿಸಿ ಹಾಗೂ ರೌಡಿ ಶೀಟರ್‍ಗಳಿಂದ ಠಾಣಾ ಎಸ್‍ಐ ಸನ್ಮಾನ ಸ್ವೀಕರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ವರುಷಗಳ ಹಿಂದೆ ನಡೆದಿದ್ದ ದನದ ವ್ಯಾಪರಿಯೊಬ್ಬನ ಕೊಲೆ ಪ್ರಕರಣದ ಈ ಅರೋಪಿಗಳು ಸ್ಥಳೀಯ ಠಾಣೆಯಲ್ಲಿ ರೌಡಿ ಶೀಟರ್‍ಗಳಾಗಿದ್ದಾರೆ. ಈ ರೌಡಿ ಶೀಟರ್‍ಗಳಿಂ ಎಸ್‍ಐ ಸನ್ಮಾನ ಸ್ವೀಕರಿಸಿರುವುದಕ್ಕೆ ಭಾರೀ ಟೀಕೆಗೆ ವ್ಯಕ್ತವಾಗುತ್ತಿದೆ. ಕೋವಿಡ್ ನಿಯಮವಳಿಗಳನ್ನು ಉಲ್ಲಂಘಿಸಿ ಅಪರಾಧಿಗಳಿಂದಲೇ ಸ್ವೀಕರಿಸಿಕೊಂಡಿರುವ ಪೊಲೀಸ್ ಅಧಿಕಾರಿ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *