Header Ads
Breaking News

ಲಾಕ್‍ಡೌನ್ ಉಲ್ಲಂಘಿಸಿ ಮದುವೆ ಮೆಹಂದಿ ಪಾರ್ಟಿ : ಕುಟುಂಬದ ವಿರುದ್ಧ ಪ್ರಕರಣ ದಾಖಲು

ಅನುಮತಿ ಇಲ್ಲದೇ ಮದುವೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಕೋವಿಡ್ -19 ನಿಯಮ ಉಲ್ಲಂಘಿಸಿದ ಆರೋಪದಡಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾವೂರು ಗ್ರಾಮದ ಶೋಭಾ ಎಂಬುವರು ಮೇ.20ರಂದು ಕೌಶಲ್ ಎಂಬುವರ ಮದುವೆಯ ಬಗ್ಗೆ ಗ್ರಾಮಪಂಚಾಯತಿನಿಂದ ಷರತ್ತುಬದ್ಧ ಅನುಮತಿ ಪಡೆದಿದ್ದರು. ಆದರೆ, ಮದುವೆ ಮುನ್ನಾ ದಿನ ಮೇ.19ರಂದು ರಾತ್ರಿ ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜಿಸಿ ಧ್ವನಿವರ್ಧಕ ಬಳಸಿ ಯಾವುದೇ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ನೃತ್ಯ ಮಾಡುವ ಮೂಲಕ ಕೋವಿಡ್ -19ನಿಯಮ ಉಲ್ಲಂಘಿಸಿದ್ದಾರೆ ಎಂದು ಪಾವೂರು ಗ್ರಾಪಂ ಪಿಡಿಒ ಸುಧಾರಣೆ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.ಅದರಂತೆ ಕೊಣಾಜೆ ಪೊಲೀಸರು ಕರ್ನಾಟಕ ಎಪಿಡಮಿಕ್ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related posts

Leave a Reply

Your email address will not be published. Required fields are marked *