Header Ads
Breaking News

ಲಾಕ್ ಡೌನ್ ಅವಧಿ ವಿಸ್ತರಣೆ : ಅನಗತ್ಯ ಓಡಾಟದ ವಾಹನಗಳಿಗೆ ದಂಡ ವಿಧಿಸಿದ ಪೊಲೀಸರು

ಹೊಳೆನರಸೀಪುರದಲ್ಲಿ ಅನಗತ್ಯವಾಗಿ ಪಟ್ಟಣದಲ್ಲಿ ಅಡ್ಡಾಡುತ್ತಿದ್ದ ಬೈಕ್ ಮತ್ತು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿದರು. ಹಾಸನ ಮೈಸೂರು 373 ರ ರಾಷ್ಟ್ರೀಯ ಹೆದ್ದಾರಿ ಗೆ ಹೊಂದಿಕೊಂಡಂತಿರುವ ಅರಣ್ಯ ಇಲಾಖೆ ಆವರಣಕ್ಕೆ ಸುಮಾರು 70 ವಾಹನಗಳನ್ನು ತಂದು ನಿಲ್ಲಿಸಲಾಗಿದೆ. ಕರ್ಫ್ಯೂ ಇರುವುದರಿಂದ ಎಲ್ಲಾ ಭಾಗದ ರಸ್ತೆಗಳ ಬಳಿ ಪೊಲೀಸರ ನ್ನು ನಿಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಪಿಎಸ್‍ಐ ಕುಮಾರ್ ಮಾತನಾಡಿ ರೈತರು ತಮ್ಮ ಜಮೀನಿಗೆ ಕೃಷಿ ಚಟುವಟಿಕೆ ಮಾಡಲು ಹೋಗುವವರಿಗೆ ಔಷಧಿ ಅಂಗಡಿ .ತುರ್ತು ಕಾರ್ಯ. ಆಸ್ಪತ್ರೆಗೆ ಹೋಗುವವರಿಗೆ. ವಯಸ್ಸಾದವರಿಗೆ ಹಣ್ಣು ಹಂಪಲ ಖರೀದಿಸುವವರಿಗೆ ಸೂಕ್ತ ಮಾಹಿತಿ ಆಧರಿಸಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅನಗತ್ಯವಾಗಿ ಕಾನೂನು ಉಲ್ಲಂಘಿಸಿ ಅಡ್ಡಾಡುವ ಅಥವಾ ಸಂಚರಿಸುವ ವಾಹನ ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

Related posts

Leave a Reply

Your email address will not be published. Required fields are marked *