Header Ads
Breaking News

ಲಾಕ್ ಡೌನ್ ಬಿಗಿ ರೂಲ್ಸ್ ಗೆ ಮಹಿಳೆ ಬಲಿ

ಜಿಲ್ಲೆಯನ್ನು ಕಾಡುತ್ತಿರುವ ಕೊರೋನಾ ಮತ್ತು ಹಾಕಲಾಗಿರುವ ಲಾಕ್ ಡೌನ್ ಕಾರ್ಕಳದ ಮಹಿಳೆಯ ಪಾಲಿಗೆ ಯಮನಾಗಿದ್ದು ಕಾಡಿದಂತು ನಿಜ. ಸಕಾಲದಲ್ಲಿ ಚಿಕಿತ್ಸೆ ಸಿಗದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ಸರಕಾರಿ ಆಸ್ಪತ್ರೆಗೆ ಎದೆನೋವು ಮತ್ತು ಉಸಿರಾಟದ ತೊಂದರೆ ಇದೆ ಎಂದು ದಾಖಲಾದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಪೊಲೀಸರ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಈ ಸಾವು ಸಂಭವಿಸಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ತಾಲೂಕಿನ ನಲ್ಲೂರು ಗ್ರಾಮದ ಮಂಜುಳಾ(38) ಮೃತಪಟ್ಟ ಮಹಿಳೆ. ಇವರಿಗೆ ಇಂದು ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಬಜಗೋಳಿ ಸಮೀಪದ ಚೆಕ್ ಪೊಸ್ಟ್‍ನಲ್ಲಿ ಪೊಲೀಸರು ಲಾಕ್‍ಡೌನ್ ನೆಪವೊಡ್ಡಿ ವಾಹನವನ್ನು ತಡೆದು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಬಳಿಕ ಒಳರಸ್ತೆಯ ಮೂಲಕ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲೂ ವೈದ್ಯರಿಲ್ಲ ಎಂಬ ಕಾರಣ ನೀಡಿದ್ದರಿಂದ ಮಂಜುಳಾರಿಗೆ ತಕ್ಷಣಕ್ಕೆ ಚಿಕಿತ್ಸೆ ಲಭಿಸಿಲ್ಲ. ಇದೇ ಕಾರಣಕ್ಕೆ ಮಂಜುಳಾ ಮೃತಪಟ್ಟಿರುವುದಾಗಿ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *