Header Ads
Breaking News

ಲಾರಿ ಚಾಲಕರ ಹಸಿವು ನೀಗಿಸುತ್ತಿದೆ ಸೇವಾ ಭಾರತಿ ತಂಡ

ಕೊರೊನಾ ಮಹಾಮಾರಿ ಅಟ್ಟಹಾಸದಿಂದ ರಾಜ್ಯ ಸರ್ಕಾರ ಹೇರಿರುವ ಲಾಕ್ ಡೌನ್ ನಿಂದ ಇಡೀ ರಾಜ್ಯವೇ ಸ್ಥಬ್ದವಾಗಿದೆ. ಅದ್ರೆ ದೇಶ ಮೂಲೆ ಮೂಲೆಗಳಿಗೆ ಸರಕು ಸಾಗಣೆ ಮಾಡುವ ಲಾರಿ ಡ್ರೈವರ್ ಗಳು ಅಹಾರಕ್ಕಾಗಿ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ಹೆದ್ದಾರಿಯಲ್ಲಿ ಸಾಗುವ ಸರಕು ಸಾಗಾಟದ ಲಾರಿ ,ಟ್ಯಾಂಕರ್ ಲಾರಿ ಅಂಬುಲ್ಯಾನ್ಸ್ ವಾಹನ ಚಾಲಕರ ಹಸಿವು ನೀಗಿಸುವ ಕಾರ್ಯವನ್ನು ಕುಂದಾಪುರದ ಸೇವಾ ಭಾರತಿ ತಂಡ ಮಾಡುತ್ತಿದೆ. ಸೇವಾ ಭಾರತಿ ತಂಡವು ಪ್ರತಿ ದಿನ ಕೋಟೇಶ್ವರದ ಹೆದ್ದಾರಿ ಬಳಿ ಲಾರಿ ಗಳನ್ನು ಅಡ್ಡ ಹಾಕಿ ಅವರಿಗೆ ಅವಶ್ಯವಿರುವ ಆಹಾರ ಪೆÇಟ್ಟಣ ಹಾಗೂ ನೀರಿನ ಬಾಟಲ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.
ಪ್ರತಿ ನಿತ್ಯ ನೂರಾರು ವಾಹನ ಚಾಲಕರಿಗೆ ಅನ್ನದಾನ ಮಾಡಲಾಗುತ್ತಿದೆ.ಜೊತೆಗೆ ಅಂಬುಲ್ಯಾನ್ಸ್ ,ದೂರದ ಊರುಗಳಿಗೆ ತೆರಳುವ ವಾಹನ ಚಾಲಕರಿಗೂ ಆಹಾರವನ್ನು ನೀಡಲಾಗುತ್ತಿದೆ.

Related posts

Leave a Reply

Your email address will not be published. Required fields are marked *