Header Ads
Breaking News

ವಾಮದಪದವಿನ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್

covid care centre bantwal

ಬಂಟ್ವಾಳ: ವಾಮದಪದವಿನಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪ್ರಾರಂಭಿಸಲಿರುವ ಕೋವಿಡ್ ಕೇರ್ ಸೆಂಟರ್ ಹಾಗೂ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋರೊನಾ ರೋಗಿಗಳಿಗಾಗಿ ಸಿದ್ಧಪಡಿಸಲಾದ ಆಕ್ಸಿಜನ್ ಸೌಕರ್ಯವನ್ನೊಳಗೊಂಡ ಬೆಡ್ ವ್ಯವಸ್ಥೆಯನ್ನು ಸೋಮವಾರ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರು ಪರಿಶೀಲನೆ ನಡೆಸಿದರು.covid care centre bantwal

covid care centre bantwal

ಅವರು ಮಾತನಾಡಿ ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಮುಂಜಾಗ್ರತಾ ಕ್ರಮವಾಗಿ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 12 ಬೆಡ್‍ಗಳನ್ನು ಆಕ್ಸಿಜನ್ ವ್ಯವಸ್ಥೆಯೊಂದಿಗೆ ಈಗಾಗಲೇ ಮೀಸಲಿಟ್ಟಿದ್ದೇವೆ. ತಾಲೂಕು ಆಸ್ಪತ್ರೆಯಲ್ಲಿನ 25 ಬೆಡ್‍ಗಳಿದ್ದು 14 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಂದಿ ಐಸಿಯುನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು ಆಸ್ಪತ್ರೆಯ ರೀತಿಯಲ್ಲೇ ಸಜ್ಜುಗೊಳಿಸಲಾಗುತ್ತಿದೆ. ಎ ಕೆಟಗರಿಯ ಗುಣಲಕ್ಷಣ ಇರುವವರಿಗೆ ಮನೆಯಲ್ಲಿ ವ್ಯವಸ್ಥೆ ಇಲ್ಲದೇ ಇದ್ದಾಗ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ಯಾರೂ ಕೂಡ ಆತಂಕ ಪಡೆಬೇಕಿಲ್ಲ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸುವುದು ಅತಿ ಅಗತ್ಯ ಎಂದರು.covid care centre bantwal covid care centre bantwal

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ರವಿರಾಮ್ ಶೆಟ್ಟಿ, ವಿನೋದ್ ಪೂಜಾರಿ, ವಾಸು, ಪ್ರಮುಖರಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ಜಗದೀಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ದೇವಿಪ್ರಸಾದ್, ಉಮೇಶ್ ಶೆಟ್ಟಿ, ರಂಜಿತ್, ವಿಶ್ವ ನಾಥ ನಾಯ್ಕ, ಹರೀಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *