Header Ads
Breaking News

ವಾಹನ ಚಾಲಕರಿಗೆ ಹಣಕ್ಕಾಗಿ ಕಿರುಕುಳದ ಆರೋಪ : ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು

ವಿಜಯಪುರ: ನಗರದ ಅಥಣಿ ರಸ್ತೆಯಲ್ಲಿ ಸಂಚರಿಸುವ ಸರಕು ಸಾಗಣೆ ವಾಹನಗಳನ್ನು ಅನಗತ್ಯ ನಿಲ್ಲಿಸಿ, ಚಾಲಕರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಪೊಲೀಸ್ ಇಲಾಖೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಹೈವೇ ಪ್ಯಾಟ್ರೋಲಿಂಗ್ ವಾಹನದಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಎಸ್ಪಿ ಅನುಪಮ ಅಗರವಾಲ ಅಮಾನತು ಮಾಡಿದ್ದಾರೆ.ಅಮಾನತು ಆದವರನ್ನು ತಿಕೋಟಾ ಪೊಲೀಸ್ ಠಾಣೆಯ ಎಎಸ್‍ಐ ಎಂ.ಎಸ್.ವಾಲಿಕಾರ ಹಾಗೂ ವಿಜಯಪುರ ಡಿಎಆರ್ ಘಟಕದ ಎ.ಎಸ್.ಐ ಯು.ಬಿ.ಚಿಗರೊಳ್ಳಿ ಎಂದು ಗುರುತಿಸಲಾಗಿದೆ.

Related posts

Leave a Reply

Your email address will not be published. Required fields are marked *