Header Ads
Breaking News

ವಿಜಯಪುರದ ಶ್ರೀ ಮಹಾಲಕ್ಷ್ಮಿ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ

ವಿಜಯಪುರ ಜಿಲ್ಲೆಯ ಶ್ರೀ ಮಹಾಲಕ್ಷ್ಮಿ ಗೆಳೆಯರ ಬಳಗದ ವತಿಯಿಂದ ಸುಮಾರು ನಾಲ್ಕು ದಿನದಿಂದ ನಗರದ ವಿವಿಧ ಆಸ್ಪತ್ರೆಗಳು ಹಾಗೂ ಬಸ್ ನಿಲ್ದಾಣ ರೈಲು ನಿಲ್ದಾಣ ಮತ್ತು ಬೀದಿಬದಿಯಲ್ಲಿ ಊಟವಿಲ್ಲದೆ ಮಲಗಿರುವ ಅನಾಥರಿಗೆ ಕೊರೊನಾ ವಾರಿಯರ್ಸ್ ಗಳಿಗೆ,ಪೊಲೀಸರಿಗೆ ಸತತವಾಗಿ ನಾಲ್ಕು ದಿನದಿಂದ ಉಪಹಾರದ ಪಾಕೆಟ್ ಹಾಗೂ ನೀರಿನ ಬಾಟಲ್ ವಿತರಣೆ ಮಾಡುತ್ತಿದ್ದಾರೆ.

ಶ್ರೀ ಮಹಾಲಕ್ಷ್ಮಿ ಗೆಳೆಯರ ಬಳಗದ ಸದಸ್ಯರಾದ ವಿನೋದ್ ಅವರು ಮಾಧ್ಯಮದೊಂದಿಗೆ ಮಾತನಾಡಿ,ನಾವು ಈ ಸಂಘದಲ್ಲಿ ಸುಮಾರು 10ರಿಂದ 15 ಸದಸ್ಯರಿದ್ದು,ನಮ್ಮ ಕಡೆಯಿಂದ ಮೂರು ವಾಹನದಲ್ಲಿನ ಉಪಹಾರ ಮತ್ತು ನೀರಿನ ಬಾಟಲ್ ವಿತರಿಸುತ್ತಿದ್ದೇವೆ. ಒಂದು ವಾಹನದಲ್ಲಿ ಸೂಮಾರು ಒಂದು ಸಾವಿರ ಉಪಹಾರದ ಪಾಕೇಟ್ ಮತ್ತು ನೀರಿನ ಬಾಟಲ್ ಗಳಿದ್ದು.ಕೊರೊನಾ ವಾರಿಯರ್ಸ್ ಗಳಿಗೆ, ,ಪೊಲೀಸರಿಗೆ ಅನಾಥರಿಗೆ ವಿತರಣೆ ಮಾಡುತ್ತೇವೆ, ಎಲ್ಲಿಯವರೆಗೆ ಲಾಕ್ ಡೌನ್ ಇರುತ್ತದೆ ಅಲ್ಲಿವರೆಗೆ ಈ ಕಾರ್ಯ ಮುಂದುವರೆಯುತ್ತದೆ ಎಂದರು.

Related posts

Leave a Reply

Your email address will not be published. Required fields are marked *