Header Ads
Breaking News

ವಿಜಯಪುರ : ಬಾವಿಯಲ್ಲಿ ಬಾಲಕಿಯರ ಶವ ಪತ್ತೆ

ವಿಜಯಪುರ ಜಿಲ್ಲೆಯ ನೂತನ ದೇವರ ಹಿಪ್ಪರಗಿ ತಾಲೂಕಿನ ಯಾಳವಾರದ ಹತ್ತಿರದ ಬಾವಿಯಲ್ಲಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿವೆ.

ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ರೇಣುಕಾ ಯಲಗೂರದಪ್ಪ ಕಳ್ಳಿಮನಿ (15), ಪ್ರೀತಿ ಶಿವರಾಜ ಕಳ್ಳಿಮನಿ (15) ಮೃತಪಟ್ಟ ದುರ್ದೈವಿಗಳು. ಗ್ರಾಮದ ಯುವಕನೊಬ್ಬ ಓರ್ವ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಮೇ 12ರಂದು ಯುವಕನನ್ನು ಪ್ರೀತಿಸುತ್ತಿದ್ದ ಬಾಲಕಿ ತನ್ನ ಗೆಳತಿಯೊಂದಿಗೆ ಮಧ್ಯಾಹ್ನ ಮನೆಯಿಂದ ಹೋದವರು ಮರಳಿ ಬಂದಿರಲಿಲ್ಲ. ಯಾಳವಾರ ಗ್ರಾಮದ ಬಳಿಯ ಬಾವಿಯಲ್ಲಿ ಇಬ್ಬರು ಬಾಲಕಿಯರ ಶವ ತೇಲುತ್ತಿರುವುದನ್ನು ಗಮನಿಸಿದ ಜಮೀನಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪಿಎಸ್‍ಐ ಬಸವರಾಜ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಯುವಕನೊಬ್ಬ ಪ್ರೀತಿ ಮಾಡುವುದಾಗಿ ಪ್ರೀತಿ ಶಿವರಾಜ ಕಳ್ಳಿಮನಿ (15) ಮೃತಪಟ್ಟ ನಂಬಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಓರ್ವ ಮೃತ ಬಾಲಕಿಯ ಸಹೋದರ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *