Header Ads
Breaking News

ವಿಟ್ಲದ ಶ್ರೀ ನಾಗಸಾನಿಧ್ಯ ಪಾರ್ಥಪಾಂಡಿ ಜಠಾದಾರಿ ದೈವಸ್ಥಾನ :ನಾಗತಂಬಿಲ, ಜಟಾಧಾರಿ ಮೈಮೆ ಹಾಗೂ ಗುಳಿಗ ದೈವದ ಕೋಲ

ವಿಟ್ಲ: ವಿಟ್ಲದ ಶ್ರೀ ನಾಗಸಾನಿಧ್ಯ ಪಾರ್ಥಪಾಂಡಿ ಜಠಾದಾರಿ ದೈವಸ್ಥಾನ ಮತ್ತು ಶ್ರೀ ರಾಜನ್ ದೈವ ಗುಳಿಗ ಸಾನಿಧ್ಯದಲ್ಲಿ ಲೋಕ ಕಲ್ಯಾಣಾರ್ಥಕವಾಗಿ ಪ್ರಾರ್ಥಿಸಿ ಕೊಂಡ ಹರಕೆಯ ನಾಗತಂಬಿಲ, ಜಟಾಧಾರಿ ಮೈಮೆ ಹಾಗೂ ಗುಳಿಗ ದೈವದ ಕೋಲವು ಎ.7ರಂದು ನಡೆಯಲಿದೆ ಎಂದು ಅಧ್ಯಕ್ಷ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ತಿಳಿಸಿದರು.

ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಆ ದಿನ ಬೆಳಿಗ್ಗೆ ಪ್ರಾರ್ಥನೆ, ಸ್ಥಳ ಶುದ್ಧಿ, ಪಂಚಗವ್ಯ, ಪುಣ್ಯಹಃ, ಶ್ರೀ ಗಣಪತಿ ಹೋಮ, ನಾಗದೇವರಿಗೆ ತಂಬಿಲ ಸೇವೆನಡೆಯಲಿದೆ. ಸಾಯಂಕಾಲ ಕುಡಾಲು ಬಾಡೂರು ಕೂಡುಕಟ್ಟಿನ ಬಾಡೂರು ಚಾವಡಿಯಿಂದ ಶ್ರೀ ಜಠಾಧಾರಿ ದೈವದ ಭಂಡಾರ ಆಗಮಿಸಲಿದೆ. ಬಳಿಕ ಶ್ರೀ ರಾಜನ್ ದೈವ ಗುಳಿಗನ ಭಂಡಾರ ಆಗಮನ, ಬಳಿಕ ಅನ್ನಸಂತರ್ಪಣೆ, ರಾತ್ರಿ ಧಾರ್ಮಿಕ ಸಭೆ ನಡೆಯಲಿದೆ ಎಂದರು.ಕಾರ್ಯಾಧ್ಯಕ್ಷರಾದ ಬಾಬು ಕೊಪ್ಪಳರವರು ಮಾತನಾಡಿ ಪರಶುರಾಮ ಶೃಷ್ಠಿಯ ನಮ್ಮ ತುಳುನಾಡಿನಲ್ಲಿ ದೈವ ದೇವರ ಬಗ್ಗೆ ಅಪಾರವಾದ ನಂಬಿಕೆವಿಶ್ವಾಸ ಇದೆ. 157 ವರುಷಗಳ ಹಿಂದೆ ನಿಂತಂತಹ ಜಠಾಧಾರಿ ಮಹಿಮೆಯನ್ನು ಎರಡು ವರುಷಗಳಿಂದ ನಾವು ಆರಾಧಿಸುತ್ತಾ ಬಂದಿದ್ದೇವೆ. ಕೊರೋನ ಮಹಾಮಾರಿಯಿಂದಾಗಿ ಉಂಟಾಗುವ ಆಪತ್ತನ್ನು ದೂರಮಾಡುವಂತೆ ಬೇಡಿಕೊಂಡಿರುವ ಪ್ರಾರ್ಥನೆಯ ಹಿನ್ನೆಲೆಯಲ್ಲಿ ಇದೀಗ ಹರಕೆಯ ಮೈಮೆಯನ್ನು ನೀಡುತ್ತಿದ್ದೇವೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಿ. ಶೈಲೇಶ್, ಗೌರವ ಸಲಹೆಗಾರರಾದ ರವಿ ವರ್ಮ, ಕಾಶಿ ಯುವಕ ಮಂಡಲದ ಅಧ್ಯಕ್ಷರಾದ ದಿವಾಕರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *