Header Ads
Breaking News

ವಿಟ್ಲ: ಮನೆ ಸೇರುತ್ತಿರುವ ಚರಂಡಿ ನೀರು : ಸಾರ್ವಜನಿಕರಿಂದ ಗ್ರಾ.ಪಂ. ಗೆ ದೂರು

ಬೋಳಂತೂರು ಗ್ರಾಮದ ದಂಡೆಮಾರ್ ಎಂಬಲ್ಲಿಯ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಯ ಬದಿಯ ಚರಂಡಿಯ ಮೇಲೆಯೇ ಆವರಣಗೋಡೆ ಕಟ್ಟಿ ಸರ್ಕಾರಿ ರಸ್ತೆಯನ್ನು ಅತಿಕ್ರಮಣ ಮಾಡುತ್ತಿದ್ದು, ಇದರಿಂದ ಚರಂಡಿ ನೀರು ಸುತ್ತಮುತ್ತಲಿನ ಮನೆಯನ್ನು ಸೇರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿ ಗ್ರಾಮ ಪಂಚಾಯತ್ ಗೆ ದೂರು ಸಲ್ಲಿಸಿದ್ದಾರೆ.

ಬೋಳಂತೂರು ಗ್ರಾಮದ ದಂಡೆಮಾರ್, ತಾಳಿತ್ತನೂಜಿ ಹೋಗುವ ರಸ್ತೆಗೆ ಮೂರು ವರ್ಷದ ಹಿಂದೆ ಡಾಮರೀಕರಣ ನಡೆಸಲಾಗಿತ್ತು. ಒಂದು ವರ್ಷದ ಹಿಂದೆ ರಸ್ತೆಗೆ ತಾಗಿಕೊಂಡಿರುವ ಖಾಸಗಿ ವ್ಯಕ್ತಿಯ ಜಾಗವಿದ್ದು, ತನ್ನ ಜಾಗಕ್ಕೆ ಆವರಣಗೋಡೆ ಕಟ್ಟುವ ನೆಪದಲ್ಲಿ ರಸ್ತೆಯ ಚರಂಡಿಯ ಸುಮಾರು 300 ಮೀಟರ್ ರಷ್ಟು ಉದ್ದಕ್ಕೆ ಚರಂಡಿಯಲ್ಲಿ ಆವರಣಗೋಡೆ ಕಟ್ಟುತ್ತಿದ್ದಾರೆ. ಕಳೆದ ಭಾರೀ ಈ ಭಾಗದ ಗ್ರಾಮಸ್ಥರು ಪಂಚಾಯತ್ ಗೆ ದೂರು ಸಲ್ಲಿಸಿದ್ದು, ಈ ಸಂದರ್ಭ ಅಧಿಕಾರಿಗಳ ತಾತ್ಕಾಲಿಕ ತಡೆ ನೀಡಿದ್ದರು. ಇದೀಗ ಮತ್ತೆ ಕಾಮಗಾರಿ ಮುಂದುವರಿಸಿದ್ದು, ಇದರಿಂದ ಚರಂಡಿಯಲ್ಲಿ ಹರಿಯುವ ನೀರು ಚರಂಡಿ ಬಂದ್ ಆಗಿದ್ದರಿಂದ ಸುತ್ತಮುತ್ತಲಿನಲ್ಲಿರುವ ಮನೆಗಳ ಅಂಗಳಕ್ಕೆ ಬರುತ್ತಿದೆ ಎಂದು ದೂರು ಸಲ್ಲಿಸಿದ್ದಾರೆ. ಆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿ ನಿಲ್ಲಿಸುವಂತೆ ಹೇಳಿದ್ದರೂ ರಾಜಾರೋಷವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಈ ಭಾಗದ ಹಸೈನಾರ್ ಮತ್ತು ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ರೈ ಆರೋಪಿಸಿದ್ದಾರೆ.

ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖಾಸಗಿ ವ್ಯಕ್ತಿ ನಾನು ಜಾಗದಲ್ಲಿ ಆವರಣಗೋಡೆ ಕಟ್ಟುತ್ತಿದ್ದೇನೆ. ಈ ಹಿಂದೆ ರಸ್ತೆ ಅಭಿವೃದ್ಧಿ ಆಗಬೇಕೆಂದು ನನ್ನ ವರ್ಗ ಜಾಗವನ್ನು ರಸ್ತೆಗೆ ಬಿಟ್ಟು ಕೊಟ್ಟಿದ್ದೇನೆ. ರಸ್ತೆ ನಿರ್ಮಾಣ ಮಾಡಿದ ಸ್ವಲ್ಪ ಭಾಗದಲ್ಲಿ ನನ್ನ ಜಾಗವಿದೆ. ಇಲ್ಲಿಯ ದೂರಿನ ಬಗ್ಗೆ ಬಂಟ್ವಾಳ ಸರ್ವೇಯರ್ ಮತ್ತು ವಿಟ್ಲ ಎಸೈ ಬಂದು ತನಿಖೆ ನಡೆಸಿದ್ದರು. ಈ ವೇಳೆ ನನ್ನ ವರ್ಗ ಜಾಗ ಎಂಬುದು ಸರ್ವೇ ವೇಳೆ ಗೊತ್ತಾಗಿದೆ. ಅದರ ಬಳಿಕ ನಾನು ಕಾಮಗಾರಿ ಮುಂದುವರಿಸಿದ್ದೇನೆ. ಈಗಾಗಲೇ ನೀರು ಹೋಗಲು ನಾವು ಅಲ್ಲಿ ಚರಂಡಿ ಮಾಡಿ ಕೊಟ್ಟಿದ್ದೇನೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

Related posts

Leave a Reply

Your email address will not be published. Required fields are marked *