Header Ads
Breaking News

ವಿದ್ಯಾರ್ಥಿಗಳಿಂದ ಮೂಡಿಬಂದ ನ್ಯೂ ಮಾಡರ್ನ್ ಆರ್ಟ್

ಕಲೆಯಲ್ಲಿ ಅದೆಷ್ಟೋ ಪ್ರತಿಭೆಗಳು ನಾನಾ ರೀತಿಯ ಕೈ ಚಳಕ ತೋರಿಸಿದ್ದಾರೆ.. ಆದ್ರೆ ಇಲ್ಲೊಂದು ವಿದ್ಯಾರ್ಥಿಗಳ ತಂಡ ತಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಕಲೆಯಲ್ಲಿ ತಮ್ಮ ವಿಶೇಷ ಕೈ ಚಳಕ ತೋರಿಸಿದ್ದಾರೆ. ಅಷ್ಟಕ್ಕೂ ಯಾರವರು..? ಅವರು ಬಿಡಿಸಿದ ಚಿತ್ರವಾದ್ರೂ ಯಾವುದು..? ಈ ಸ್ಟೋರಿ ನೋಡಿ…
ಅತ್ಯಾಕರ್ಷವಾಗಿ ಮೂಡಿ ಬಂದ ದಾಸವಾಳ, ದಾಸವಾಳದ ಮಕರಂದ ಹೀರುವ ಚಿಟ್ಟೆಗಳ ಕಲರವ. ಖಾಲಿ ಗೋಡೆಯಲ್ಲಿ ಮೂಡಿಬಂದ ಬಣ್ಣಗಳ ಚಿತ್ತಾರ…. ಈ ದೃಶ್ಯ ಕಂಡು ಬಂದಿದ್ದು, ಮಂಗಳೂರು ನಗರದ ಮಣ್ಣಗುಡ್ಡೆಯಲ್ಲಿ… ಹೌದು…ವಿದ್ಯಾರ್ಥಿಗಳ ತಂಡವೊಂದು ಮಾಡರ್ನ್ ಆರ್ಟ್ ಬಿಡಿಸುವ ಮೂಲಕ ವಿಭಿನ್ನವಾದ ಯೋಚನೆಗೆ ಮುಂದಾಗಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿ ಮಲೈಕಾ ಸಿಕ್ವೇರಾ ಮಾತನಾಡಿ, ಆರ್ಟ್ ಇಕ್ಷಿಬಿಷನ್ ಮಾಡ್ಬೇಕು ಎಂದು ಪ್ಲೇಸ್ ಸರ್ಚ್ ಮಾಡ್ಬೇಕಾದ್ರೆ ಈ ಒಂದು ಸ್ಥಳ ಸಿಕ್ಕಿದೆ. ಆದ್ರೆ ಕೊರೊನಾ ಹಿನ್ನೆಲೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಲ್ಲಿ ಒಂದು ವಾಲ್ ಖಾಲಿಯಾಗಿದ್ದರಿಂದ ಇಲ್ಲೇ ಡಿಫರೆಂಟ್ ಮಾಡರ್ನ್ ಆರ್ಟ್ ಮಾಡಿದ್ದೇವೆ ಎಂದ್ರು.
ಬಳಿಕ ಗ್ಲೋರಿಯಾ ವೇಗಸ್ ಮಾತನಾಡಿ. ಆರ್ಟ್ ರಿಲೇಟೆಡ್ ಏನಾದ್ರೂ ಮಾಡ್ಬೇಕು ಅನ್ನುವಂತಹ ಯೋಚನೆ ಬಂದಾಗ ಈ ಒಂದು ಐಡಿಯಾ ಬಂದಿದೆ. ಹಾಗಾಗಿ ಯಂಗ್ ಆರ್ಟಿಸ್ಟ್‍ಗಳಿಂದ ಈ ಒಂದು ಪೈಂಟಿಂಗ್ ಅದ್ಭುತವಾಗಿ ಮೂಡಿಬಂದಿದೆ. ಆರ್ಟ್ ಎಲ್ರಿಗೂ ರೀಚ್ ಆಗ್ಬೇಕು ಅನ್ನುವಂತಹ ದೃಷ್ಟಿಯಿಂದ ಈ ವಿದ್ಯಾರ್ಥಿಗಳಿಗೆ ಸಪೋರ್ಟ್ ಮಾಡ್ತಾ ಇದ್ದೇನೆ ಎಂದ್ರು.
ಒಟ್ಟಿನಲ್ಲಿ ಖಾಲಿ ಗೋಡೆಯಲ್ಲಿ ವಿದ್ಯಾರ್ಥಿಗಳ ಅದ್ಭುತವಾದ ಕೈಚಳಕ ಮೂಡಿಬಂದಿದ್ದು, ಇವರ ಈ ಕಲೆ ಎಲ್ಲೆಡೆ ಪಸರಿಸಲಿ ಎಂಬುದೇ ನಮ್ಮ ಆಶಯ..

Related posts

Leave a Reply

Your email address will not be published. Required fields are marked *