Header Ads
Breaking News

ವಿದ್ಯುತ್ ತಂತಿ ತುಳಿದು ಕೃಷಿಕ ಮೃತ್ಯು

ಎಲ್ಲೂರು ಗ್ರಾ.ಪಂ.ವ್ಯಾಪ್ತಿಯ ಉಳ್ಳೂರು ಎಂಬಲ್ಲಿ ಕೃಷಿಕರೋರ್ವರು ಗದ್ದೆಗೆ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ದಾರುಣಾವಾಗಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಉಳ್ಳೂರಿನ ಕೃಷಿಕ ರಮೇಶ್ ಪೂಜಾರಿ(51), ಕೃಷಿಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದರು.  ಮಧ್ಯಾಹ್ನ ಊಟಮಾಡಿದ ಇವರು ಗದ್ದೆ ಕಡೆಗೆ ತೆಂಗಿನ ಕಾಯಿ ಹೆಕ್ಕಲು ಹೋದ ಇವರು, ಅನೇಕ ತೇಪೆ ಹಾಕಲಾದ ಹಳೆಯ ತಂತಿ ಕಡಿದು ಬಿದ್ದಿದ್ದು ಗಮನಕ್ಕೆ ಬಾರದೆ ಅದನ್ನು ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದ್ದೆಗೆ ಹೋದ ಮನೆ ಯಜಮಾನ ಮರಳಿ ಬಾರದನ್ನು ಗಮನಿಸಿ ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸುತ್ತಲ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದು, ಇಲ್ಲಿ ಮಾತ್ರ ಅದೇ ಹೊತ್ತಲ್ಲಿ ಇವರ ಸಾವಿಗಾಗಿ ವಿದ್ಯುತ್ ಪ್ರತ್ಯಕ್ಷವಾದಂತ್ತಿದೆ ಎನ್ನುತ್ತಾರೆ ಜನ. ಸ್ಥಳಕ್ಕೆ ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಸಹಿತ ಇತರೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *