Header Ads
Breaking News

ವೀಕೆಂಡ್ ಕರ್ಫ್ಯೂ: ಪುತ್ತೂರಿನಲ್ಲಿ ಸಂಪೂರ್ಣ ಪಾಲನೆ

ಪುತ್ತೂರು: ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ 2 ನೇ ದಿನವಾದ ಭಾನುವಾರವೂ ಪುತ್ತೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಪಾಲನೆಯಾಯಿತು.


ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ತನಕ ಜನರಿಗೆ ಅಗತ್ಯ ವಸ್ತುಗಳ ಖರೀದಿ ನಡೆಸಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ದಿನಸಿ, ತರಕಾರಿ, ಹಾಲು, ಪತ್ರಿಕೆ ಖರೀದಿಗಾಗಿ ಗ್ರಾಹಕರು ಆಗಮಿಸಿದ್ದರು. ಅಲ್ಲದೆ ಬೇಕರಿ, ಮೆಡಿಕಲ್ ಶಾಪ್‌ಗಳಿಗೂ ಗ್ರಾಹಕರು ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿ ನಡೆಸಿ 10 ಗಂಟೆಯ ಒಳಗಾಗಿ ತಮ್ಮ ಮನೆಗೆ ತೆರಳಿದರು. ಆ ಬಳಿಕ ಸಂಪೂರ್ಣ ಬಂದ್ ಆಗಿತ್ತು. ಪುತ್ತೂರಿನಲ್ಲಿ ಶನಿವಾರ ಮತ್ತು ಆದಿತ್ಯವಾರ ಯಾವುದೇ ಕೆಎಸ್ಸಾರ್ಟಿಸಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳು ಓಡಾಟ ನಡೆಸಿಲ್ಲ. ಬೆಳಗ್ಗಿನ ವೇಳೆಯಲ್ಲಿ ಅಟೋರಿಕ್ಷಾ, ಕಾರುಗಳು ಹಾಗೂ ದ್ವಿಚಕ್ರವಾಹನಗಳು ಓಡಾಟ ನಡೆಸುತ್ತಿದ್ದವು. ನಗರ ಪ್ರದೇಶದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ನಡೆಸಿದ್ದರು.

Related posts

Leave a Reply

Your email address will not be published. Required fields are marked *