Header Ads
Breaking News

“ವೃತ್ತಿ ಮಾರ್ಗದರ್ಶನ” ಮತ್ತು “ಸ್ವಯಂ ಪ್ರೇರಣೆ ಗುರಿ ನಿರ್ಧಾರ” ಎನ್ನುವ ವಿಚಾರದ ಕುರಿತು ಕಾರ್ಯಗಾರ

ಮಂಗಳೂರಿನ ಪ್ರತಿಷ್ಠಿತ ಪದವಿ ಪೂರ್ವ ಕಾಲೇಜಿಗಳಲ್ಲಿ ಒಂದಾಗಿರುವ ಡಾ.ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜಿನಲ್ಲಿ “ವೃತ್ತಿ ಮಾರ್ಗದರ್ಶನ” ಮತ್ತು “ಸ್ವಯಂ ಪ್ರೇರಣೆ ಗುರಿ ನಿರ್ಧಾರ” ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ನಗರದ ನಂತೂರಿನಲ್ಲಿರುವ ಡಾ.ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜಿನಲ್ಲಿ “ವೃತ್ತಿ ಮಾರ್ಗದರ್ಶನ” ಮತ್ತು “ಸ್ವಯಂ ಪ್ರೇರಣೆ ಗುರಿ ನಿರ್ಧಾರ” ಎನ್ನುವ ವಿಚಾರದ ಕುರಿತು ಕಾರ್ಯಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು ಕಾರ್ಯಗಾರದ ಕುರಿತು ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಶೆಟ್ಟಿ ಮಾತನಾಡಿ ನಾಲ್ಕು ಗೋಡೆಗಳ ಮದ್ಯೆ ಕೇವಲ ಪಠ್ಯ ಪುಸ್ತಕದ ಕುರಿತು ಮಾಹಿತಿ ನೀಡುವುದು ಮಾತ್ರ ಶಿಕ್ಷಣ ಸಂಸ್ಥೆಗಳ ಕೆಲಸವಲ್ಲ, ಇದರ ನಡುವೆ ಜೀವನವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವುದು ಮುಖ್ಯ ಈ ಕಾರ್ಯವನ್ನು ನಮ್ಮ ಕಾಲೇಜು ಮಾಡುತ್ತಿದೆ.

ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು ಇನ್ನೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾವೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕರಾದ ಲೂಯಿಸ್ ಮನೋಜ್, ಸ್ವಸ್ತಿಕ್ ನ್ಯಾಶನಲ್ ಸ್ಕೂಲ್‌ನ ನಿರ್ದೇಶಕರಾದ ಡಾ. ರಾಘವೇಂದ್ರ ಹೊಳ್ಳ, ಫ್ರೀಲಾನ್ಸ್ ತರಬೇತುದಾರರಾದ ವರ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ” ಮತ್ತು “ಸ್ವಯಂ ಪ್ರೇರಣೆ ಗುರಿ ನಿರ್ಧಾರ” ಎನ್ನುವ ವಿಚಾರದ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಈ ಸಂದರ್ಭ ಕಾರ್ಯಕ್ರಮ ಸಂಯೋಜಕರಾದ ಶಕುಂತಲ ಶೆಟ್ಟಿ, ಪುರುಷೋತ್ತಮ, ಉಪನ್ಯಾಸಕರಾದ ಸಂಗೀತ ಶೆಟ್ಟಿ, ವಿದ್ಯಾ ಎಮ್.ಎನ್, ವೀಣಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *