Header Ads
Breaking News

ವೆನ್‍ಲಾಕ್ ಆಸ್ಪತ್ರೆಯಲ್ಲಿ ಹೆಲ್ತ್ ಡೆಸ್ಕ್ ಸ್ಥಾಪಿಸುವ ಬಗ್ಗೆ ಚರ್ಚೆ: ಶಾಸಕ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ ಹೇಳಿಕೆ

ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸುವ ಬಗ್ಗೆ ಶಾಸಕ ಡಾ.ಭರತ್ ಶೆಟ್ಟಿ ವೈ, ಮತ್ತು ವೇದವ್ಯಾಸ ಕಾಮತ್ ಚರ್ಚಿಸಿದರು. ಬಳಿಕ ಆಸ್ಪತ್ರೆಯ ಶುಶ್ರೂಷೆ ವಿಭಾಗಕ್ಕೆ ಭೇಟಿ ನೀಡಿದರು. ಕೌನ್ಸಿಲರ್ ಜತೆ ಮಾತುಕತೆ ನಡೆಸಿದರು. ರೋಗಿಗಳ ಸಂಬಂಧಿಗಳು ಗೊಂದಲಕ್ಕೆ ಒಳಗಾಗದಂತೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು. ಪರಿಣಿತ ಮಾಹಿತಿ ಸಂವಹನಕಾರರನ್ನು ನೇಮಿಸಲು ಕ್ರಮಕ್ಕೆ ಸಲಹೆ ನೀಡಿದರು. 

ಮಂಗಳೂರಿನ ವೆನ್ ಲಾಕ್ ನಲ್ಲಿ ಯಾವುದೇ ಮಾಹಿತಿ ಸಿಗದೆ ರೋಗಿಗಳು,ಅವರ ಕುಟುಂಬಸ್ಥರು ಬರುವ ಸಂದರ್ಭ ಆತಂಕಕ್ಕೆ ಒಳಗಾಗಿರುತ್ತಾರೆ.ಇದರ ನಡುವೆ ಇಲ್ಲಿನ ಸಿಬಂದಿಗಳ ಅತಿರೇಕದ ವರ್ತನೆಯಿಂದ ಜನ ವೆನ್ ಲಾಕ್ ಬಗ್ಗೆ ಜನರ ಮನಸ್ಸಿನಲ್ಲಿ ಹೇಸಿಗೆ ಹುಟ್ಟುವ ಪರಿಸ್ಥಿತಿ ಬರುತ್ತಿದೆ.ಇದನ್ನು ಹೋಗಲಾಡಿಸಲು ಹೆಲ್ಪ್ ಡೆಸ್ಕ್ ನ್ನು ಕೂಡಲೇ ರಚಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚಿಸಿದ್ದಾರೆ.ಈ ಸಂದರ್ಭ ಡಿಎಚ್ ಒ ಡಾ. ಕಿಶೋರ್ ಕುಮಾರ್, ಡಿಎಂಒ ಡಾ.ಸದಾಶಿವ ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *