Header Ads
Breaking News

ಶಾಸಕ ಡಾ.ಭರತ್ ಶೆಟ್ಟಿಯವರಿಂದ ಟಾಸ್ಕ್ ಪೋರ್ಸ್ ಸಭೆ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಗಂಜಿಮಠ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಕಾರ್ಯಪಡೆಯ ಸಭೆಯು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಿತು. ಕಾರ್ಯಪಡೆಯ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಶಾಸಕರು ಸವಿವರವಾಗಿ ಮಾಹಿತಿ ನೀಡಿದರು. ಕಾರ್ಯಪಡೆ ನಾಮಕಾವಸ್ತೆಯಾಗದೇ ಮಾದರಿ ಸೇವಾ ಕಾರ್ಯ ನಿರ್ವಹಿಸಬೇಕು.ಕೊರೊನಾ ಸೊಂಕಿತರಾಗಿ ಮನೆಯಲ್ಲಿ ಐಸೋಲೇಶನ್ ನಲ್ಲಿ ಇರುವವರಿಗೂ ಧೈರ್ಯ ತುಂಬಿ ಅವರ ಪ್ರಾಥಮಿಕ ಸೊಂಕಿತರಿಂದ ಬೇರೆಯವರಿಗೆ ಹರಡದಂತೆ ಜಾಗೃತೆ ವಹಿಸಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರ ಜೊತೆಗೆ ಪಂಚಾಯತ್ ಅಧ್ಯಕ್ಷರಾದ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷರಾದ ಕುಮುದ ನಾಯ್ಕ್,ತಾಲೂಕು ಪಂಚಾಯಿತ್ ಸದಸ್ಯ ಜಿ ಸುನಿಲ್, ಪಂಚಾಯತ್ ಸದಸ್ಯರುಗಳು, ಆರೋಗ್ಯ ವೈದ್ಯಾಧಿಕಾರಿ ಅಮಿತ್ ರಾಜ್, ಪಿಡಿಒ, ಆರೋಗ್ಯ ಅಧಿಕಾರಿಗಳು, ಮತ್ತು ಸಹಾಯಕಿಯರು, ಗಿಂ ದಿನೇಶ್,ಸೋಹನ್ ಅತಿಕಾರಿ, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *