Header Ads
Breaking News

ಹೊಳೆಯಲ್ಲಿ ಮುಳುಗಿ ಮೂವರು ಯುವಕರು ಮೃತ್ಯು

shirva death news
shirva death news

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಮೂವರು ಯುವಕರು ನೀರುಪಾಲಾಗಿ ಮೃತಪಟ್ಟ ಘಟನೆ ನಡೆದಿದೆ. ಪೈಂಟಿಂಗ್ ಕೆಲಸ ಮುಗಿಸಿ ಐದು ಜನ ಯುವಕರು ಕೈಕಾಲು ತೊಳೆಯಲು ನೀರಿಗಿಳಿದಿದ್ದರು. ನೀರಿನ ಆಳ ತಿಳಿಯದೆ ನೀರಿಗೆ ಇಳಿದ ಯುವಕರಲ್ಲಿ ಒಬ್ಬ ಮುಳುಗಡೆಗೊಂಡ ಗೆಳೆಯನನ್ನು ರಕ್ಷಿಸಲು ಹೋದ ಇಬ್ಬರು ನೀರಿನಲ್ಲಿ ಮುಳುಗಡೆಯಾಗಿದ್ದರು. shirva death newsಪಾಪನಾಶಿನಿ ನದಿ ತುಂಬಿ ಹರಿಯುವುದರಿಂದ ನೀರಿನ ಆಳ ತಿಳಿಯದೆ ನೀರಿಗೆ ಇಳಿದು ಮೂವರು ಮೃತಪಟ್ಟಿದ್ದಾರೆ. ಮಲ್ಪೆ ಮುಳುಗು ತಜ್ಞ ಈಶ್ವರ್ ನೀರಿಗೆ ಇಳಿದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆಶಂಕರಪುರ ನಿವಾಸಿ ಕೆಲ್ವಿನ್ ಪ್ರಾಯ, ಕಟಪಾಡಿ ಸರ್ಕಾರಿ ಗುಡ್ಡೆ ನಿವಾಸಿಗಳಾದ ರಿಜ್ವಾನ್, ಜಾಬಿರ್ ಎಂದು ಗುರುತಿಸಲಾಗಿದೆ. ಶಿರ್ವ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ರವಾನಿಸಲಾಗಿದೆ. ಕಾಪು ವೃತ್ತ ನಿರೀಕ್ಷಕರಾದ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *