Header Ads
Breaking News

ಶಿವ ರೂಪಿಣಿಯಾದ ರೂಪದರ್ಶಿ ದಿಯಾ ಶೆಟ್ಟಿ

ಬೆಂಗಳೂರು , ಮಾ.12 : ಖ್ಯಾತ ಯುವ ರೂಪದರ್ಶಿ ದಿಯಾ ಶೆಟ್ಟಿ ಅವರು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವ ರೂಪಿಣಿಯಾಗಿ ನಡೆಸಿದ ಪೊಟೋ ಶೂಟ್ ಈಗ ಸಾಮಾಜಿಕ ಜಾಲ ತಾಣದಲ್ಲಿ ‌ಬಾರೀ ಜನಪ್ರಿಯತೆ ಪಡೆದಿದೆ.
ಬೆಂಗಳೂರಿನ ಬಿಷಪ್ ಕಾಟನ್ಸ್ ಕಾಲೇಜಿನಲ್ಲಿ ಓದಿರುವ ದಿಯಾ ಶೆಟ್ಟಿ ಅವರು ವಿದ್ಯಾರ್ಥಿಯಾಗಿದ್ದಾಗಲೇ ಫ್ಯಾಶನ್ ಶೋಗಳಲ್ಲಿ ಮಿಂಚಿದವರು. ಮಾಡೆಲಿಂಗ್ ಕ್ಷೇತ್ರವನ್ನೇ ಆದ್ಯತೆಯಾಗಿ ಆಯ್ದುಕೊಂಡಿರುವ ದಿಯಾ ಶೆಟ್ಟಿ ಅವರು , ಈ ತನಕ 75 ಕ್ಕೂ ಹೆಚ್ಚು ಮಾಡೆಲಿಂಗ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಸುಮಾರು 65 ರಷ್ಟು ಜಾಹಿರಾತು ಶೂಟ್ ನಲ್ಲಿ ಭಾಗವಹಿಸಿದ್ದಾರೆ.
ವಿವಿಧ ಉತ್ಪನ್ನಗಳು , ಕಂಪೆನಿಗಳು, ಪ್ರತಿಷ್ಠಿತ ಜುವ್ಯಲ್ಲರಿಗಳು, ಬ್ರಾಂಡೆಡ್ ಕ್ಲೋತ್ ಕಂಪೆನಿಗಳ ಜಾಹಿರಾತಿಗೆ ರೂಪದರ್ಶಿಯಾಗಿ ದಿಯಾ ಶೆಟ್ಟಿ ಮಿಂಚಿದ್ದಾರೆ.
ದಿಯಾ ಶೆಟ್ಟಿ ಅವರು‌ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ.
ಹಲವು ಮಹತ್ವದ ದಿನಗಳಲ್ಲಿ ಆಯಾ ದಿನದ ಮಹತ್ವ‌ಕ್ಕೆ‌ ಸಂಬಂಧಿಸಿದಂತೆ ಪೊಟೋ ಶೂಟ್ ನಡೆಸಿ ಗಮನ ಸೆಳೆಯುತ್ತಿರುವ ದಿಯಾ ಶೆಟ್ಟಿ ಅವರು , ಈ ಬಾರಿ
ಮಹಾ ಶಿವರಾತ್ರಿ ‌ಸಲುವಾಗಿ ಶಿವ ರೂಪಿಣಿ ರೂಪದರ್ಶಿಯಾಗಿ ಮಿಂಚಿದ್ದಾರೆ.
ಕರಾವಳಿ ಮೂಲದವರಾಗಿರುವ ದಿಯಾ ಅವರು ಕುಂದಾಪುರದ ಸರೋಜಾ ಶೆಟ್ಟಿ ಅವರ ಪುತ್ರಿ .ತಂದೆ ಹೈದರಾಬಾದ್‌ ನವರು.ಹಲವು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟ ಗೆದ್ದ ಹೆಗ್ಗಳಿಕೆ ದಿಯಾ ಅವರದ್ದು, 2014 ರಲ್ಲಿ‌ ಮಿಸ್ ಸೌತ್ ಇಂಡಿಯಾ, 2015 ರಲ್ಲಿ ಮಿಸ್ ಬೆಂಗಳೂರು, 2016 ರಲ್ಲಿ ವರ್ಷದ ಅತ್ಯುತ್ತಮ ರೂಪದರ್ಶಿ ಪ್ರಶಸ್ತಿ , 2019 ರಲ್ಲಿ ‌ಇಂಟರ್ ನ್ಯಾಷನಲ್ ಪೊಟೋಗ್ರಪಿ ಅವಾರ್ಡ್ ‌, 2020 ರಲ್ಲಿ ಬ್ಲ್ಯಾಕ್ ಆಂಡ್ ವೈಟ್ ಪೊಟೊಗ್ರಪಿ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳು ದಿಯಾ ಅವರ ಮುಡಿಗೇರಿದೆ.

Related posts

Leave a Reply

Your email address will not be published. Required fields are marked *