Header Ads
Breaking News

ಶ್ರೀಕ್ಷೇತ್ರ ಕೊಂಡಾಣದಲ್ಲಿ ಕಟ್ಟ ಕಟ್ಟಳೆ ಉಲ್ಲಂಘಿಸಿ ಕಾರ್ಯಕ್ರಮ ನಡೆಸಬಾರದು : ರಾಜೇಶ್ ರೈ ಕೋಟೆಕಾರು

ಉಳ್ಳಾಲ: ವೈಯಕ್ತಿಕ ವರ್ಚಸ್ಸಿನ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಕೆಲವರ ಮೇಲಿನ ಸೇಡನ್ನು ತೀರಿಸಲು ಶ್ರೀ ಕ್ಷೇತ್ರ ಕೊಂಡಾಣವನ್ನು ವೇದಿಕೆ ಮಾಡಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಕ್ರಮ ಇಡೀ ಗ್ರಾಮಸ್ಥರು ಮತ್ತು ಶ್ರೀ ಕ್ಷೇತ್ರದ ಭಕ್ತಾಧಿಗಳಿಗೆ ನೋವನ್ನು ತಂದಿದ್ದು, ಶ್ರೀ ಕ್ಷೇತ್ರದಲ್ಲಿ ಈ ಹಿಂದೆ ನಡೆದಂತೆ ಸಂಪ್ರಾದಾಯ, ಕಟ್ಟುಕಟ್ಟಳೆಯಂತೆ ಕಾರ್ಯಕ್ರಮಗಳನ್ನು ನಡೆಸಬೇಕು ಇದಕ್ಕೆ ವ್ಯವಸ್ಥಾಪನಾ ಸಮಿತಿ ವ್ಯವಸ್ಥೆ ಮಾಡಬೇಕು ಹೊರತು ಕಟ್ಟುಕಟ್ಟಳೆಯನ್ನು ಉಲ್ಲಂಘಿಸಿ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಶ್ರೀ ಕ್ಷೇತ್ರ ಕೊಂಡಾಣದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರು ಗುತ್ತು ಅವರು ಒತ್ತಾಯಿಸಿದರು.

ಶ್ರೀ ಕ್ಷೇತ್ರ ಕೊಂಡಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಇಡೀ ರಾಜ್ಯಕ್ಕೆ ಒಂದೇ ಕಾನೂನು ಆದರೆ ತುಳುನಾಡಿನ ದೈವಾರಾದನೆ ಕಟ್ಟುಪಾಡುಗಳ ಕುರಿತು ಪ್ರಸ್ತಾಪ ಇಲ್ಲ. ದೇವಸ್ಥಾನದಲ್ಲಿ ಅರ್ಚಕ ವರ್ಗ ಮತ್ತು ವ್ಯವಸ್ಥಾಪನಾ ಸಮಿತಿ ಇದ್ದರೆ ದೇವಸ್ಥಾನದ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯ ಆದರೆ ದೈವಸ್ಥಾನದಲ್ಲಿ ಅದರದ್ದೇ ಆದ ಕಟ್ಟುಪಾಡು, ಸಂಪ್ರದಾಯವನ್ನು ಗುರಿಕಾರರು, ಆಚಾರಪಟ್ಟವರು, ಚಾಕರಿಯವರು ಮತ್ತು ಭಂಡಾರ ಮನೆಯವರು ಸೇರಿ ಶ್ರೀ ಕ್ಷೇತ್ರದ ತಂತ್ರಿಯವರ ಮಾರ್ಗದರ್ಶನದಲ್ಲಿ ಗ್ರಾಮಸ್ಥರು ಮತ್ತು ಭಕ್ತಾಧಿಗಳ ಸಹಕಾರದಿಂದ ಮಾಡಲು ಸಾಧ್ಯ ವಿನಹ ಓರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಂದ ಮತ್ತು ಸದಸ್ಯರಿಂದ ಸಾದ್ಯವಿಲ್ಲ. ಈ ಕಟ್ಟುಪಾಡುಗಳಿಗೆ ದಾಖಲೆಯನ್ನು ನೀಡಲೂ ಸಾದ್ಯವಿಲ್ಲ. ನೂತನ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು ಅವರು ಅಧಿಕಾರಕ್ಕೆ ಬಂದ ಪ್ರಥಮದಲ್ಲಿ ಹೂವಿನ ಪೂಜೆ ಎಲ್ಲರ ಸಹಕಾರದಿಂದ ನಡೆದಿತ್ತು. ಅದೇ ಮಾದರಿಯಲ್ಲಿ ಜಾತ್ರಾ ಮಹೋತ್ಸವದ ಕಾರ್ಯಗಳು ನಡೆಯಬೇಕಿತ್ತು. ಆದರೆ ವೈಯಕ್ತಿಕ ಧ್ವೇಷವನ್ನು ದೈವಸ್ಥಾನದ ಒಳಗೆ ತಂದಿದ್ದೇ ಈ ಗೊಂದಲಗಳಿಗೆ ಕಾರಣವಾಗಿದೆ ಎಂದು ರಾಜೇಶ್ ರೈ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ಮೋಹನ್ ರಾಜ್ ಕೆ.ಆರ್, ರಾಜ್ ಕೊಂಡಾಣ, ಪಿಲಿಚಾಮುಂಡಿ ದೈವದ ಪಾತ್ರಿ ನಾರಾಯಣ ಮೂಲ್ಯ, ಬಂಟ ದೈವದ ಪಾತ್ರಿ ಗೋಕುಲ, ಪ್ರಮುಖರಾದ ರವೀಂದ್ರ ಶೆಟ್ಟಿ ಭಂಡಾರಮನೆ, ಪ್ರಸಾದ್ ಮಡ್ಯಾರ್, ಗುರಿಕಾರರು ಹಾಗೂ ಚಾಕರಿ ವರ್ಗದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *