Header Ads
Breaking News

ಶ್ರೀ ಮಹಾಬಲೇಶ್ವರ ಎಮ್. ಎಸ್‍ರವರಿಗೆ ಎ. ಶಾಮರಾವ್ ಸ್ಮಾರಕ ಸಾಧಕ ಪ್ರಶಸ್ತಿ 2021

ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ, ಕೊಡುಗೆ ನೀಡಿ ಯಶಸ್ವಿಯಾದ ಅಪರೂಪದ ಸಾಧಕರನ್ನು ಗುರುತಿಸಿ ಗೌರವಿಸುವ ಧ್ಯೇಯ ಹೊಂದಿರುವ ಎ.ಶಾಮರಾವ್ ಪ್ರತಿಷ್ಠಾನವು ಶ್ರೀ ಮಹಾಬಲೇಶ್ವರ ಎಮ್. ಎಸ್ ಇವರನ್ನು ಪ್ರಸಕ್ತ ವರ್ಷ 2021ರ ಎ.ಶಾಮರಾವ್ ಸ್ಮಾರಕ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬ್ಯಾಂಕಿಂಗ್, ಸಾಲ ಯೋಜನೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಮಹಾಬಲೇಶ್ವರ ಎಮ್. ಎಸ್ ಇವರಿಗೆ ಪಾಂಡೇಶ್ವರದ ಶ್ರೀನಿವಾಸ್ ಶೈಕ್ಷಣಿಕ ಆವರಣದಲ್ಲಿ ಎಪ್ರಿಲ್ 17ರಂದು ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ, ಡಾ. ಸಿಎ. ಎ. ರಾಘವೇಂದ್ರರಾವ್‍ರವರ, ಅಧ್ಯಕ್ಷತೆಯಲ್ಲಿ ನಡೆಯುವ ಎ.ಶಾಮರಾವ್ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಯೋಜಕ ಡಾ.ಎ.ಆರ್ ಶಬರಾಯ ತಿಳಿಸಿರುತ್ತಾರೆ.

Related posts

Leave a Reply

Your email address will not be published. Required fields are marked *