Header Ads
Breaking News

ಶ್ರೀ ವಿಷ್ಣು ವಿಠೋಭ ಭಜನಾ ಮಂದಿರ, ಬೊಕ್ಕಪಟ್ಣ, ಬೆಂಗ್ರೆ ಬ್ರಹ್ಮಕಲಶೋತ್ಸವ : ಹೊರೆಕಾಣಿಕೆ ಕಾರ್ಯಕ್ರಮ

ಶ್ರೀ ವಿಷ್ಣು ವಿಠೋಭ ಭಜನಾ ಮಂದಿರ ರಿ. ಬೊಕ್ಕಪಟ್ಣ ಬೆಂಗ್ರೆ ಯಲ್ಲಿ ಶ್ರೀ ವಿಷ್ಣು ವಿಠೋಭ ದೇವರ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಅಖಂಡ ಭಜನಾ ಸಪ್ತಾಹ ಸಹಿತ ಹನುಮಜ್ಜಯಂತಿ ಮಹೋತ್ಸವ ಏ.18ರಿಂದ 27ರವರೆಗೆ ನಡೆಯಲಿದೆ.

ಈ ಬಗ್ಗೆ ಬ್ರಹ್ಮಕಲಶ ಹಾಗೂ ಸಪ್ತಾಹ ಸಮಿತಿಯ ಅಧ್ಯಕ್ಷರಾದ ಅನಿಲ್ ಕುಮಾರ್ ಮಾತನಾಡಿ, ಇದರ ಅಂಗವಾಗಿ ಆದಿ ಶ್ರೀ ಬ್ರಹ್ಮಮೊಗೇರ ಮಹಾಂಕಾಳಿ ದೈವಸ್ಥಾನ, ತಣ್ಣೀರುಭಾವಿ ಸಭಾಂಗಣದಿಂದ ಶ್ರೀ ವಿಷ್ಣು ವಿಠೋಭ ಭಜನಾ ಮಂದಿರಕ್ಕೆ ಹೊರೆಕಾಣಿಕೆ ಸಮರ್ಪಣೆಯಾಯಿತು. ಅನೇಕ ಭಕ್ತಾಧಿಗಳು ಈ ಕಾರ್ಯದಲ್ಲಿ ಪಾಲ್ಕೊಂಡಿದ್ದಾರೆ ಎಂದು ಹೇಳಿದ ಅವರು ಇನ್ನು ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.
ಈ ವೇಳೆ ಆಡಳಿತ ಸಮಿತಿಯ ಅಧ್ಯಕ್ಷರಾದ ಕಿರಣ್ ಸುವರ್ಣ, ಪ್ರ.ಕಾರ್ಯದರ್ಶಿ ಅಮಿತ್ ಶ್ರೀಯಾನ್, ಕೋಶಾಧಿಕಾರಿ ಮನೋಜ್ ಅಮೀನ್, ಪ್ರಧಾನ ಅರ್ಚಕರಾದ ಯಾದವ ತಿಂಗಳಾಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *