Header Ads
Breaking News

ಸಮುದ್ರದಲ್ಲಿ ಸಿಲುಕಿದ್ದ 9 ಜನರ ರಕ್ಷಣೆ

ಕರಾವಳಿ ಭಾಗದಲ್ಲಿ ತೌಕ್ತೇ ಚಂಡಮಾರುತದಿಂದ ಕಾಪುವಿನ ಲೈಟ್ ಹೌಸ್ ಸಮೀಪದಲ್ಲಿ 9 ಮಂದಿಯಿದ್ದ ಟಗ್‌ವೊಂದು ಬಂಡೆಕಲ್ಲಿಗೆ ಢಿಕ್ಕಿಯಾಗಿ ಅಪಾಯದ ಸ್ಥಿತಿಯಲ್ಲಿತ್ತು. ಇದೀಗ ಕರಾವಳಿ ಕಾವಲುಪಡೆಯ ಸಹಾಯದಿಂದ 9 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಸೋಮವಾರ ಮುಂಜಾನೆಯಿಂದ ನೌಕಾ ಪಡೆಯ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಿಸಿದ್ದು, ಟಗ್‌ನಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್‌ ಎಸ್.ಬಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಸಮುದ್ರದ ಪ್ರಕ್ಷುಬ್ಧತೆಯಿಂದ ಕಾಪು ಲೈಟ್‌ಹೌಸ್‌ನಿಂದ ಸುಮಾರು ಐದು ನಾಟಿಕಲ್ ಮೈಲಿ ದೂರದಲ್ಲಿ ಬಂಡೆಗಳ ನಡುವೆ ಟಗ್‌ ಸಿಲುಕಿಕೊಂಡಿತ್ತು.

Related posts

Leave a Reply

Your email address will not be published. Required fields are marked *