Header Ads
Breaking News

ಸರಕಾರ ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಹೊಡೆದಿದೆ : ಐವನ್ ಡಿಸೋಜಾ

ರಾಜ್ಯ ಸರಕಾರ ಲಾಕ್‍ಡೌನ್ ಇಲ್ಲ ಎಂದು ಹೇಳಿದೆ. ಆದರೆ ರಾಜ್ಯ ಸರಕಾರ ವೀಕೆಂಡ್ ಕರ್ಪ್ಯೂ ಹೇರಿದೆ. ಎಲ್ಲವನ್ನೂ ಬಂದ್ ಮಾಡಿ ಲಾಕ್‍ಡೌನ್ ಇಲ್ಲ ಅಂತಾ ಹೇಳ್ತಾರೆ. ಸರಕಾರ ಮದ್ಯಮ ವರ್ಗದ ಜನರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಲ್ಲವನ್ನೂ ಬಂದ್ ಮಾಡಿ ಬಡವರಿಗೆ ತೊಂದರೆಯುಂಟಾಗಿದೆ. ಹಾಗಾಗಿ ಸರಕಾರ ಬಡವರಿಗೆ, ನಿರ್ಗತಿಕರಿಗೆ, ಆಹಾರದ ಕಿಟ್‍ಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೊವಿಡ್ ನಿಂದ ಮೃತಪಟ್ಟವರ ದಪನ ಕಾರ್ಯಕ್ಕೆ ಬೊಳೂರಿನಲ್ಲಿ 8 ಸಾವಿರ ಹಣ ಪಾವತಿಸಬೇಕಿತ್ತು. ಜಿಲ್ಲಾಧಿಕಾರಿಯವರಿಗೆ ಇದರಲ್ಲಿ ವಿನಾಯಿತಿ ನೀಡಲು ಮನವಿ ಮಾಡಿದೆ. ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ಕೂಡಲೇ ಇದರ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದ್ದಾರೆ. ಕೊವಿಡ್ ನಿಂದ ಮೃತರಾದ ದೇಹವನ್ನು ಊಳುವುದಕ್ಕಾಗಿ ಪ್ರತ್ಯೇಕ ಭೂಮಿಯ ಬೇಡಿಕೆಯನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ. ದ.ಕ ಜಿಲ್ಲೆಯಲ್ಲಿ ಎರಡು ಆಕ್ಸಿಜನ್ ಉತ್ಪಾದನೆ ಕೇಂದ್ರಗಳಿದ್ದು ಯಾವುದೇ ರೀತಿ ಆಕ್ಸಿಜನ್ ಕೊರತೆ ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ವಾಕ್ಸಿನ್ ನ ಕೊರತೆಯಿರುವುದು ಜಿಲ್ಲಾಧಿಕಾರಿಯವೇ ಒಪ್ಪಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕೊವಿಡ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಶಾಸಕರು ಗುದ್ದಲಿ ಪೂಜೆ ಮಾಡುವುದರಲ್ಲೇ ಬ್ಯೂಸಿ ಆಗಿದ್ದಾರೆ ಎಂದು ಮಂಗಳೂರಿನಲ್ಲಿ ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜಾ ಕಿಡಿಕಾರಿದ್ದಾರೆ.

Related posts

Leave a Reply

Your email address will not be published. Required fields are marked *