Header Ads
Breaking News

ಅಕ್ರಮ ಮರಳು ಮಾಫಿಯಾ : ಡಿವೈಎಸ್ಪಿ ಶ್ರೀಧರ್ ದೊಡ್ಡಿ ನೇತೃತ್ವದ ಪೊಲೀಸ್ ತಂಡ ದಾಳಿ

ರಾಜ್ಯದಲ್ಲಿ ಕೋರನಾ ಎರಡನೆ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಪರದಾಡುತ್ತಿದ್ದರೆ, ಆದರೆ ಈ ಜಿಲ್ಲೆಯಲ್ಲಿ ಮರಳು ಮಾಫಿಯಾ ದಂಧೆಕೋರರು ಮಾತ್ರ ಕಾನೂನಿನ ಯಾವುದೇ ಅರಿವಿಲ್ಲದೆ ರಾಜಾರೋಷವಾಗಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ದುಪ್ಪಟ್ಟು ಹಣಕ್ಕೆ ಮಾರುತ್ತಿದ್ದಾರೆ. 

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಾಗಲೂರು ಬಳಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಸ್ಥಳಗಳ ಮೇಲೆ ಇಂಡಿ ಡಿವೈಎಸ್ಪಿ ಶ್ರೀಧರ್ ದೊಡ್ಡಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ 1346 ಬ್ರಾಸ್ ಮರಳನ್ನು ವಶಕ್ಕೆ ಪಡೆದಿದೆ. ಬಗಳೂರ ಗ್ರಾಮದ ಸರ್ವೆ ನಂಬರ್ 154 ರಲ್ಲಿ 384 ಬ್ರಾಸ್.ವಿಎಸ್‍ಎಂ ಹೈಸ್ಕೂಲ್ ಆವರಣದಲ್ಲಿ 102 ಬ್ರಾಸ್, ಸಿದ್ದರಾಮಪ್ಪ ರುದ್ರಗೌಡ ಘತ್ತರಗಿ ಅವರ ಜಮೀನಿನಲ್ಲಿ 440 ಬ್ರಾಸ್, ದೇವನಗೌಡ ಕಿರಣಗಿ ಅವರ ಜಮೀನಿನಲ್ಲಿ 120 ಬ್ರಾಸ್, ಹಾಗೂ ರಾಜು ಕುರನಳ್ಳಿ ಅವರ ಜಮೀನಿನಲ್ಲಿ ಅಂದಾಜು 300 ಬ್ರಾಸ್, ಮರಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು.ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಸಿಂದಗಿ ಸಿಪಿಐ ಎಚ್ ಎಂ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಜತೆಗೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಗಳಾದ ಸಿದ್ರಾಮಪ್ಪ ಘತ್ತರಗಿ,ವಿಎಸ್‍ಎಂ ಹೈಸ್ಕೂಲ್ ಚೇರ್ಮನ್,ದೇವನಗೌಡ ಕಿರಣಗಿ ಹಾಗೂ ಸರ್ವೇ ನಂ 154ರ ಜಮೀನಿನ ಮಾಲೀಕನ ವಿರುದ್ಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

Related posts

Leave a Reply

Your email address will not be published. Required fields are marked *