Header Ads
Breaking News

ಸಿಐಎಸ್‌ಎಫ್ ಏಕತಾ ಸೈಕಲ್ ರ್‍ಯಾಲಿ: ಪಣಂಬೂರಿನಲ್ಲಿ ಸೈಕಲ್ ರ್‍ಯಾಲಿಗೆ ಸ್ವಾಗತ

75 ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ದೇಶದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಯೋಧರು ಕೇರಳದ ತಿರುವನಂತಪುರದಿಂದ ಗುಜರಾತ್‌ನ ಕೇವಾಡಿಯವರೆಗೆ ಸೈಕಲ್ ರ್‍ಯಾಲಿ ಹಮ್ಮಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಿತು.

ನಿರತ ಯೋಧರನ್ನು ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯ ಮತ್ತು ಎನ್‌ಎಂಪಿಟಿ, ಎಂಆರ್‌ಪಿಎಲ್ ಇದರ ಸಿಐಎಸ್‌ಎಫ್ ಘಟಕಗಳು ಸ್ವಾಗತ ಕೋರಿ ಸಮ್ಮಾನಿಸಿ, ಶ್ಲಾಘನೆ ವ್ಯಕ್ತಪಡಿಸಿದರು. ಎನ್‌ಎಂಪಿಟಿ ಚೇರ್ಮನ್ ಡಾ. ವೆಂಕಟರಮಣ ಅಕ್ಕರಾಜು ಯೋಧರನ್ನು ಸ್ವಾಗತಿಸಿ ವಿಶ್ವವೇ ಒಂದು ಮನೆಯಾದರೆ ಭಾರತ ಅದರ ದೇವರ ಕೋಣೆ ಇದ್ದಂತೆ. ಅಂತಹ ದೇಶದಲ್ಲಿರುವ ಪರಶುರಾಮ ಸೃಷ್ಠಿಯ ಪುಣ್ಯಭೂಮಿಗೆ ಸ್ವಾಗತ ಎಂದರು

ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಅಶುತೋಷ್ ಘೋರ್, ಸಿಐಎಸ್‌ಎಫ್ ಎಂಆರ್ ಪಿಎಲ್ ಕಮಾಂಡೆಂಟ್ ಬಿಕ್ರಮ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *