Header Ads
Breaking News

ಸಿ.ಟಿ.ರವಿ ಒಬ್ಬ ಕುಲ ಗೋತ್ರ ಗೊತ್ತಿಲ್ಲದ್ದ ಮನುಷ್ಯ : ಮಾಜಿ ಸಚಿವ ಬಿ. ರಮಾನಾಥ್ ರೈ ಕಿಡಿ

ನಾಯಕರು ಅಂದರೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅಲ್ಲಾ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ಪ್ರತಿಕ್ರಿಯಿಸಿದ್ದಾರೆ.

ಅವರು ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಸಿ.ಟಿ.ರವಿ ಒಬ್ಬ ಕುಲ ಗೋತ್ರ ಗೊತ್ತಿಲ್ಲದ್ದ ಮನುಷ್ಯ ತನ್ನ ಕುಲ ಗೋತ್ರ ಯಾವುದು ಎಂಬುದು ಅವನಿಗೆ ಗೊತ್ತಿಲ್ಲ. ರಾಜೀವ್, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟವರು. ಕಾಂಗ್ರೆಸ್ ನಾಯಕರು ಹೋರಾಟ ಮಾಡಿ ಜೈಲಿಗೆ ಹೋದ್ರೆ, ಸಿಎಂ ಬಿಎಸ್‌ವೈ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು. ಅಂತವರೇ ಬಿಜೆಪಿಯವರಿಗೆ ಉತ್ತಮ ನಾಯಕರು ಎಂದು ಮಾಜಿ ಸಚಿವ ರಮಾನಾಥ್ ರೈ ಕಿಡಿಕಾರಿದ್ದಾರೆ.
ಇನ್ನು ಕೋವಿಡ್ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ. ಬಾಯಿ ಮಾತಿನ ಉಪಚಾರದಿಂದ ಕೊರೊನಾ ನಿಯಂತ್ರಣ ಆಗಲ್ಲ. ಉಸ್ತುವಾರಿ ಸಚಿವರು ಕೋವಿಡ್ ನಿಯಂತ್ರಿಸುವಲ್ಲಿ ಆಕ್ಟಿವ್ ಇಲ್ಲ. ಅಧಿಕಾರಿಗಳು, ಸಚಿವರು, ಶಾಸಕರ ನಡುವೆ ಸಮನ್ವಯ ಇಲ್ಲದಾಗಿದೆ. ನೈಟ್ ಕರ್ಪ್ಯೂ ಹಾಕಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಲಾಕ್‌ಡೌನ್ ಬಗ್ಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಚರ್ಚೆ ಆಗುತ್ತಿದೆ. ನೈಟ್ ಕರ್ಪ್ಯೂ ಹಾಕಿ ಡೇ ಟೈಮ್ ಜನರನ್ನ ಫ್ರೀ ಬಿಡ್ತಾರೆ. ಕೊರೊನಾ ಏನು ರಾತ್ರಿ ಸಮಯದಲ್ಲಿ ಮಾತ್ರ ಬರುವುದಾ ? ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಶ್ನಿಸಿದ್ದಾರೆ.

Related posts

Leave a Reply

Your email address will not be published. Required fields are marked *