Header Ads
Breaking News

ಸುರತ್ಕಲ್ ಎನ್‍ಐಟಿಕೆಯಲ್ಲಿ ಕೋವಿಡ್ ಐಸೋಲೇಷನ್ ಕೇಂದ್ರ : ಮುಕ್ಕ ಶ್ರೀನಿವಾಸ್ ಆಸ್ಪತ್ರೆ ಸಿಬ್ಬಂದಿಯಿಂದ ಚಿಕಿತ್ಸೆ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಮೇಲೆ ನಿಗಾ ಮತ್ತು ಬೇರ್ಪಡಿಸುವಿಕೆ ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಕುರಿತಂತೆ ಸುರತ್ಕಲ್‍ನ ಎನ್‍ಐಟಿಕೆಯಲ್ಲಿ ಐಸೋಲೇಷನ್ ಕೇಂದ್ರ ಆರಂಭಗೊಂಡಿದೆ. ಇಲ್ಲಿ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‍ಗಳು ಸೇವೆಯನ್ನು ನೀಡಲಿದ್ದಾರೆ.

ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವತಿಯಿಂದ ವೈದ್ಯರು, ನರ್ಸ್‍ಗಳು ಹಾಗೂ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಶಾಸಕ ಡಾ. ಭರತ್ ಶೆಟ್ಟಿ ಅವರು ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರು, ಎನ್‍ಐಟಿಕೆ ಆಡಳಿತ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಎನ್‍ಐಟಿಕೆಯಲ್ಲಿನ ಹಾಸ್ಟೆಲ್‍ನ ಮೂರು ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಇನ್ನೂರು ಬೆಡ್‍ಗಳ ಸಾಮಥ್ರ್ಯವುಳ್ಳ ಕೇಂದ್ರವನ್ನು ಸಿದ್ಧಗೊಳಿಸಲಾಗಿದೆ. ಅವಶ್ಯಕತೆ ಬಿದ್ದರೆ ಮತ್ತೆ ಮುನ್ನೂರು ಬೆಡ್‍ಗಳ ಐಸೋಲೇಸನ್ ಕೇಂದ್ರ ಇಲ್ಲಿ ನಿರ್ಮಾಣ ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.

ಇದೇ ವೇಳೆ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ನಿರ್ದೇಶಕ ಎ ಶ್ರೀನಿವಾಸ ರಾವ್ ಅವರು ಮಾತನಾಡಿ, ಶ್ರೀನಿವಾಸ್ ಆಸ್ಪತ್ರೆ ವತಿಯಿಂದ ಎಲ್ಲಾ ವೈದ್ಯಕೀಯ ನೆರವನ್ನು ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಪಾಲಿಕೆಯ ಸ್ಥಾಯೀ ಸಮಿತಿಯ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ, ಮನಪಾ ಸದಸ್ಯೆ ಶ್ವೇತ ಎ, ಸರಿತ ಶಶಿಧರ್, ಮುಕ್ಕ ಆಸ್ಪತ್ರೆಯ ಡಾ. ಉದಯಕುಮಾರ್, ಎನ್‍ಐಟಿಕೆ ರಿಜಿಸ್ಟ್ರಾರ್ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *