Header Ads
Breaking News

ಸುರತ್ಕಲ್: ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಮೇಲೆ ನಿಗಾ ,ಬೇರ್ಪಡಿಸುವಿಕೆ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಕುರಿತಂತೆ ಕೋವಿಡ್ ಸೆಂಟರ್ ಸ್ಥಾಪಿಸಲು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯನ್ನು ನಡೆಸಿದರು.

ಸುರತ್ಕಲ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಸಮಾಜಕಲ್ಯಾಣ ಇಲಾಖೆಗೆ ಒಳಪಟ್ಟ ಹಾಸ್ಟೆಲ್, ಎನ್‍ಐಟಿಕೆ ಹಾಸ್ಟೆಲ್ ಹಾಗೂ ಮಲ್ಯ ಭವನ, ಹೊಸಬೆಟ್ಟುವಿನಲ್ಲಿರುವ ಪ್ರಾಕೃತಿಕ ವಿಕೋಪ ನಿರ್ವಹಣಾ ಭವನವನ್ನು ಪರಿಶೀಲಿಸಲಾಯಿತು. ಎನ್‍ಐಟಿಕೆಯಲ್ಲಿ ಹಾಸ್ಟೆಲ್ನ ಮೂರು ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು,ಇನ್ನೂರು ಬೆಡ್ಗಳ ಸಾಮರ್ಥ್ಯವುಳ್ಳ ಕೇಂದ್ರವನ್ನು ಸಿದ್ದಗೊಳಿಸಲಾಗಿದೆ. ಅವಶ್ಯಕತೆ ಬಿದ್ದರೆ ಮತ್ತೆ ಮುನ್ನೂರು ಬೆಡ್ಗಳ ಐಸೋಲೇಷನ್ ಕೇಂದ್ರ ಇಲ್ಲಿ ನಿಮರ್?ಣ ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ.ಒಟ್ಟು ಸಾವಿರಕ್ಕೂ ಮಿಕ್ಕಿ ಜನರ ನಿಗಾ ಕೇಂದ್ರಕ್ಕೆ ಇಲ್ಲಿ ಅವಕಾಶವಿದೆ.ಹೊಸಬೆಟ್ಟುವಿನಲ್ಲಿರುವ ಪ್ರಕೃತಿ ವಿಕೋಪ ನಿರ್ವಹಣಾ ಭವನವನ್ನು ಕೂಡ ಪರಿಶೀಲಿಸಲಾಗಿದ್ದು ಸ್ಥಳೀಯರಿಗೆ ಅಗತ್ಯವಿದ್ದರೆ ಬಳಕೆಗೆ ಸಿಗಲು ಸೂಕ್ತ ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಯಿತು.

ಪರಿಶೀಲನೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಡಾ,ಭರತ್ ಶೆಟ್ಟಿ ವೈ ಅವರು ಕೊರೊನಾ ಪಾಸಿಟವ್ ಬಂದರೂ ಮನೆಯಲ್ಲಿ ಕೆಲವು ಕುಳಿತುಕೊಳ್ಳದೆ ಮತ್ತಷ್ಟು ಕೊರೊನಾ ಹರಡಲು ಕಾರಣವಾಗುತ್ತಿರುವ ವರದಿಗಳು ಬರುತ್ತಿದೆ. ಇದನ್ನು ತಡೆಯಲು ಹಾಗೂ ಪಾಸಿಟವ್ ಆದವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸಲು ಐಸೋಲೇಷನ್ ಸೆಂಟರ್ ಅಗತ್ಯವಾಗಿದೆ ಎಂದರು.

ವೈದ್ಯಾಧಿಕಾರಿಗಳು, ನರ್ಸ್‍ಗಳು ವೈದ್ಯಕೀಯ ಸೇವೆಗೆ ಲಭ್ಯವಿರುತ್ತಾರೆ. ಸುರತ್ಕಲ್ ಮಾತ್ರವಲ್ಲದೆ ಕಾವೂರು, ಮುಚ್ಚೂರು ಹಾಗೂ ಗುರುಪುರದಲ್ಲಿ ಮೂರು ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಪ್ರತೀ ವಾರ್ಡ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಪತ್ತೆ ಹಚ್ಚುವಿಕೆ, ನಿಗಾ ಮತ್ತಿತರ ಕೆಲಸವನ್ನು ಮಾಡಲಿದೆ. ಜನತೆ ಭಯ ಬಿಟ್ಟು ಸೋಂಕಿನ ಪ್ರಸರಣವನ್ನು ತಡೆಯಲು ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದರು.

ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್,ತಹಶೀಲ್ದಾರ್ ಗುರುಪ್ರಸಾದ್, ಗ್ರಾಮ ಕರಣಿಕ ಮಲ್ಯ, ನಿರ್ಮಿತಿ ಕೇಂದ್ರದ ಹಿರಿಯ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಕಾರ್ಪೋರೇಟರ್ ವರುಣ್ ಚೌಟ, ಶ್ವೇತಾ, ಭರತ್ ರಾಜ್ ಕೃಷ್ಣಾಪುರ, ವಿಠಲ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *