Header Ads
Breaking News

ಸುರತ್ಕಲ್ ಲೈಟ್‍ಹೌಸ್ ಬೀಚ್ ರಸ್ತೆಗೆ ಶಾಸಕ ಭರತ್ ಶೆಟ್ಟಿ ಭೇಟಿ

ಸುರತ್ಕಲ್: ಸುರತ್ಕಲ್ ಲೈಟ್ ಹೌಸ್ ಬೀಚ್ ರಸ್ತೆ ಸಂಪೂರ್ಣ ವಾಗಿ ಚಂಡಮಾರತದ ಹೊಡೆತಕ್ಕೆ ಸಮುದ್ರಪಾಲಾಗಿದ್ದು ಶಾಸಕ ಡಾ.ಭರತ್ ಶೆಟ್ಟಿ ವೈ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳನ್ನು ಹಾನಿಗೀಡಾದ ಪ್ರದೇಶಕ್ಕೆ ಕರೆಸಿ ಮಾತುಕತೆ ನಡೆಸಿದರು. ನಬಾರ್ಡ್ ಅನುದಾನದಿಂದ ಹೊಸ ರಸ್ತೆ ಈ ಭಾಗದಲ್ಲಿ ನಿರ್ಮಿಸಲಾಗಿತ್ತು.

ಇದೀಗ ಸರಕಾರದ ಪ್ರಕೃತಿ ವಿಕೋಪ ಪರಿಹಾರ ಅನುದಾನ ಹಾಗೂ ಪ್ರವಾಸೋಧ್ಯಮಕ್ಕೆ ಅನುಕೂಲವಾಗುವಂತೆ ವಿಶೇಷ ಅನುದಾನ ತರುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಚರ್ಚಿಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಮನಪಾ ಸದಸ್ಯೆ ಶ್ವೇತ ಎ ಈ ಸಂದರ್ಭ ಶಾಸಕರ ಜತೆಗಿದ್ದರು.

Related posts

Leave a Reply

Your email address will not be published. Required fields are marked *