Header Ads
Breaking News

ಸುಳ್ಯದಲ್ಲಿ ಅಕ್ರಮ ಬಂದೂಕು ತಯಾರಿಕಾ ಘಟಕ ಪ್ರಕರಣ : ಸಮಗ್ರ ತನಿಖೆ ನಡೆಸುವಂತೆ ಎಸ್‍ಡಿಪಿಐ ಆಗ್ರಹ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಂದೂಕು ಘಟಕಕ್ಕೆ ಪೊಲಿಸರ ತಂಡ ದಾಳಿ ನಡೆಸಿ ನಾಲ್ಕು ಆರೋಪಿಗಳನ್ನು ಬಂಧಿಸಿದ ಕಾರ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ವಾಗತಿಸುತ್ತದೆ.

ಪುತ್ತೂರು ಸಹಾಯಕ ಪೊಲಿಸ್ ಅಧೀಕ್ಷಕ ವ್ಯಾಪ್ತಿಯಲ್ಲಿ ಈ ಹಿಂದೆಯು ಇಂತಹ ಹಲವಾರು ಪ್ರಕರಣಗಳು ಬಯಲಾಗಿದೆ,ಇದೊಂದು ದೊಡ್ಡ ಜಾಲವೆಂಬಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ, ಗೌರಿಲಂಕೇಶ್ ಹತ್ಯೆಯ ಆರೋಪಿಗಳಿಗೆ ಇದೇ ಅಕ್ರಮ ಬಂದೂಕು ತಯಾರಿಕಾ ಘಟಕದ ಆಸುಪಾಸಿನ ಪ್ರದೇಶಗಳಲ್ಲಿ ತರಬೇತಿ ನೀಡಲಾಗಿತ್ತು ಎಂಬ ಆತಂಕಕಾರಿ ವಿಚಾರವನ್ನು ತನಿಖಾ ಸಂಸ್ಥೆಯ ವರದಿಯಲ್ಲಿ ಬಹಿರಂಗ ವಾಗಿತ್ತು, ಆದರೂ ಈ ಗೌರಿಲಂಕೇಶ್ ಹತ್ಯಾ ಪ್ರಕರಣದ ಬಗ್ಗೆ ಸಮಗ್ರ ವಾದ ತನಿಖೆ ನಡೆಯದೇ ಇರುವುದರಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ, ಕಳೆದ ವರ್ಷ ಈಶ್ವರಮಂಗಳದಲ್ಲಿ ಸಜೀವ ಬಾಂಬ್ ಸಹಿತ ವ್ಯಕ್ತಿಯನ್ನು ಬಂಧಿಸಲಾಗಿತ್ತು,ಅದೇ ರೀತಿ ಗೋವಾ ಸ್ಪೋಟದ ಆರೋಪಿ ಸನಾತನ ಸಂಸ್ಥೆಯ ಕಾರ್ಯಕರ್ತ ಸದ್ಯ ಭೂಗತವಾಗಿರುವ ಭಯೋತ್ಪಾದಕ ಜಯಪ್ರಕಾಶ್ ಬೆಳ್ಚಡ ಎಂಬವನ ಊರು ಪ್ರಸ್ತುತ ಪ್ರಕರಣದಲ್ಲಿ ಬಂಧನವಾಗಿರುವ ಎರಡು ಆರೋಪಿಗಳ ಊರಾದ ಕಡಬದ ಆಸುಪಾಸಿನಲ್ಲೇ ಆಗಿರುವುದರಿಂದ ಈತನೇ ಭೂಗತವಾಗಿದ್ದುವಾಗಿದ್ದುಕೊಂಡು ತನ್ನ ಭಯೋತ್ಪಾದನಾ ಮತ್ತು ಕ್ರಿಮಿನಲ್ ಚಟುವಟಿಕೆಗಳನ್ನು ತನ್ನ ಸ್ಥಳೀಯ ಅನುಯಾಯಿಗಳ ಮೂಲಕ ಮಾಡಿಸುತ್ತಿದ್ದಾನೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆಯಲ್ಲದೇ ಜನರ ಆತಂಕಕ್ಕೂ ಕಾರಣವಾಗಿದೆ.

ಹಾಗಾಗಿ ಈ ಅಕ್ರಮ ಬಂದೂಕು ಪ್ರಕರಣದ ಬಗ್ಗೆ ಸಮಗ್ರ ವಾದ ತನಿಖೆ ನಡೆಸಬೇಕು ಎಂದು ಎಸ್ ಡಿಪಿಐ ನಿಯೋಗ ಪೊಲೀಸ್ ಉನ್ನತ ಅಧಿಕಾರಿಗಳನ್ನು ಭೇಟಿ ನೀಡಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಎಸ್‍ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ,ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆ.ಎ ,ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ , ಸುಳ್ಯ ಎಸ್ ಡಿಪಿಐ ಕಾರ್ಯದರ್ಶಿ ಮುಸ್ತಫಾ ಎಂ.ಕೆ, ಎಸ್ ಡಿಪಿಐ ಕಡಬ ತಾಲೂಕು ಕಾರ್ಯದರ್ಶಿ ರಫೀಕ್ ನೆಲ್ಯಾಡಿ ಮತ್ತಿತರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *