Header Ads
Breaking News

ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಅಧಿಕ ದರ ವಿಧಿಸಲಾಗುತ್ತಿರುವ ಆರೋಪ : ಅಧಿಕಾರಿಗಳ ದಿಢೀರ್ ಭೇಟಿ

ಹಾಸನ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂ ಹಾಗೂ ಲ್ಯಾಬ್‍ಗಲ್ಲಿ ಗಳಲ್ಲಿ ಕೋವಿಡ್ 19 ಸಂಬಂಧಿತ ಸಿ.ಟಿ ಸ್ಕ್ಯಾನಿಂಗ್ ಗೆ ಅಧಿಕ ದರ ವಿಧಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅರ್ ಗಿರೀಶ್ ಅವರ ಸೂಚನೆಯ ಮೇರೆಗೆ ಹಾಸನ ತಹಶಿಲ್ದಾರ್ ಶಿವಶಂಕರಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ ವಿಜಯ್ ಹಾಗೂ ಬಡಾವಣೆ ಠಾಣೆಯ ಪಿ.ಎಸ್ ಐ ಆಶ್ವಿನಿ ನಾಯಕ್ ಅವರು ನಗರದ ಎಲ್ಲಾ ಖಾಸಗಿ ಅಸ್ಪತ್ರೆ ಹಾಗೂ ಲ್ಯಾಬ್ ಗಳಿಗೆ ದಿಢೀರ್ ಭೇಟಿ ನೀಡಿ ಪರಶೀಲನೆ ನಡೆಸಿದರು.
ಸರ್ಕಾರ ಸಿ.ಟಿ ಸ್ಕ್ಯಾನಿಂಗ್ ಗೆ ಬಿ.ಪಿ.ಎಲ್ ಕಾರ್ಡ್ ದಾರರಿಗೆ 1500 ರೂ ಹಾಗೂ ಎ.ಪಿ.ಎಲ್ ಕಾರ್ಡ್ ದಾರರಿಗೆ 2500ರೂ ನಿಗದಿ ಪಡಿಸಿದ್ದು ಕೆಲವೆಡೆ ಅದಕ್ಕಿಂತ ಹೆಚ್ಚು ಹಣ ಪಡೆದಿರುವುದು ಪತ್ತೆಯಾಗಿದೆ .ಈ ಬಗ್ಗೆ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗೆ ವರದಿ ನೀಡಲಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ವಿಜಯ್ ಬಿ ಎಂ ಅವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *