Header Ads
Breaking News

ಸ್ನಾನಕ್ಕೆಂದು ನದಿಗಿಳಿದ ಯುವಕರು ಶವವಾಗಿ ಪತ್ತೆ

ಕುಮಾರಧಾರ ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಕಡಬ ತಾಲೂಕಿನ ಇಚಿಲಂಪಾಡಿಯಲ್ಲಿ ನಡೆದಿದೆ.
ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಝಾಕಿರ್(20) ಹಾಗೂ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ ಸಿನಾನ್ ಮೃತ ಪಟ್ಟ ಯುವಕರು. ಮೃತ ಯುವಕರು ಸ್ನಾನಕ್ಕೆಂದು ಇಚಿಲಂಪಾಡಿ ಸೇತುವೆ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ನೀರಿಗಿಳಿದು ಇಬ್ಬರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷದ ಮಾರ್ಚ್ ಕೊನೆಯಲ್ಲೂ ಇದೇ ಜಾಗದಲ್ಲಿ ನದಿಗೆ ಇಳಿದ ಯುವಕರಿಬ್ಬರೂ ಮೃತಪಟ್ಟಿದ್ದರು.ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದೂ, ಜೆಸಿಬಿ ಇತ್ಯಾದಿ ಯಂತ್ರಗಳನ್ನು ಉಪಯೋಗಿಸಿ ಮರಳು ದಂಧೆ ನಡೆಯುತ್ತಿದೆ. ಹೀಗಾಗಿ ನದಿಯ ಮರಳು ತೆಗೆದ ಹಿನ್ನಲೆಯಲ್ಲಿ ಆಳದ ಅಂದಾಜು ಸಿಗದ ಯುವಕರು ಅಲ್ಲಿಗೆ ಇಳಿದು ಅಪಾಯ ಮೈಮೇಲೆ ಎಳೆದುಕೊಂಡರೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Related posts

Leave a Reply

Your email address will not be published. Required fields are marked *