Header Ads
Breaking News

ಹಸಿದೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ ಯುವಕ ಮಂಡಳಿ

ಕುಂದಾಪುರ : ಸರಕಾರವೇನು ಕೊರೊನಾ ನಿರ್ಭಂದಕ್ಕೆ ರಾಜ್ಯಾಧ್ಯಂತ ಲಾಕ್ ಡೌನ್ ಮಾಡಿ, ಜನರ ದುಡಿಮೆಗೂ ಅಡ್ಡಿಯಾಗಿದೆ. ಜನರು ತಮ್ಮ ಹೊಟ್ಟೆ ಹಸಿವಿನಿಂದ ಕಂಗಾಲಾಗಿ ಹೋಗಿದ್ದಾರೆ

ಒಂದು ಕಡೆ ಕೊರೊನಾ ರೋಗ ಜನರನ್ನು ಬಿಟ್ಟುಬಿಡದೆ ಕಾಡುತ್ತಿದ್ದರೆ. ಅದರ ನಿಯಂತ್ರಣಕ್ಕೆ ಸರಕಾರ ಹಾಕುವ “ಲಾಕ್”ಗೆ ಎಷ್ಟೋ ಬಡವರು, ಬಿಕ್ಷುಕರು ಈ ಸಮಯದಲ್ಲಿ ಅನ್ನ, ನೀರಿಲ್ಲದೆ ಹಸಿವಿನಿಂದ ಕಂಗೆಟ್ಟು ಅವರ ಉಸಿರೆ “ಡೌನ್” ಆಗಿ ಒದ್ದಾಡುವುದನ್ನು ನಾವು ಕಾಣುತ್ತಿದ್ದೇವೆ.
ಇಂತವರ ನೆರವಿಗೆ ಅಲ್ಲಲ್ಲಿ ಸಂಘ-ಸಂಸ್ಥೆಗಳು, ಮತ್ತೊಬ್ಬರ ನೋವಿಗೆ ಸ್ಪಂದಿಸುವ ಮನಗಳು ಸಹ, ನಮ್ಮ- ನಿಮ್ಮ ನಡುವೆ ಇದೆ ಎಂಬವುದು ಸತ್ಯ.ಉಡುಪಿ ಜಿಲ್ಲೆಯ ಕುಂದಾಪುರದ ತಾಲೂಕಿನ ಶ್ರೀ ನಾರಾಯಣ ಗುರು ಯುವಕ ಮಂಡಳಿ(ರಿ)ಯವರಿಂದು ಲಾಕ್ ಡೌನ್ ಇಂದಾಗಿ ದಿನದ ಕೂಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಅಲ್ಲಿನ ಸುತ್ತ-ಮುತ್ತ ಪರಿಸರದಲ್ಲಿನ ಬಡವರಿಗೆ, ವಿಕಲ ಚೇತನರಿಗೆ, ಲಾರಿ ಚಾಲಕರಿಗೆ, ಹಾಗೂ ಹಣ ವಿದ್ದರೂ ಸಹ, ಊಟ ಮಾಡಲು ಹೊಟೇಲ್ ಗಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಸುಮಾರು 250 ಜನರ ಹಸಿವಿನ ಹೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ್ದಿದ್ದಾರೆ.ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಶ್ರೀನಾಥ ಕಡ್ಗಿಮನೆ, ಕಾರ್ಯದರ್ಶಿ ವಿಜಯ್ ಪೂಜಾರಿ,ಕಿರಣ್ ಪೂಜಾರಿ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *